Ad imageAd image

ಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ

Bharath Vaibhav
ಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ
WhatsApp Group Join Now
Telegram Group Join Now

ಹೂಗಾರ ಗುರವ,ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘ (ರ) ಗೋಕಾಕ ಹಾಗೂ ಮೂಡಲಗಿ ತಾಲೂಕ ಘಟಕ ದ ಅಶ್ರಯದಲ್ಲಿ ಬಸವಾದಿ ಶರಣ, ಕಾಯಕ ಯೋಗಿ, ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ಕಿಲ್ಲಾ ಗೋಕಾಕ ಇಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಆದೃಕ್ಷತೆ ವಹಿಸಿ ಮಾತನಾಡಿದ ಶ್ರೀ ಶಿವಲಿಂಗಪ್ರಭು ಹೂಗಾರ ಜಿಲ್ಲಾಧ್ಯಕ್ಷರು , ಓಬಿಸಿ ಮೋರ್ಚಾ ಬಿಜೆಪಿ ಮಹಾನಗರ ಬೆಳಗಾವಿ ಜಿಲ್ಲೆ ಇವರು ಹೂಗಾರ ಸಮಾಜದ ಬೆಳವಣಿಗೆಗೆ ಶಿಕ್ಷಣ ಬಹು ಮುಖ್ಯ ಈ ನಿಟ್ಟಿನಲ್ಲಿ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸತೀಶ ಅಶೋಕ ಪೂಜಾರಿ ನ್ಯಾಯವಾದಿಗಳು ಗೋಕಾಕ ಇವರು ಮಾತನಾಡಿ ಹೂಗಾರ ಮಾದಯ್ಯನವರ ಕಾಯಕ ತಲೆ ತಲಾಂತರವಾಗಿ ಬಂದಿದ್ದು ಈ ಸಮುದಾಯದ ಗಟ್ಟಿ ಧ್ವನಿ ಹೊರ ಹೊಮ್ಮುಬೇಕಾಗಿದೆ ಎಂದರು. ಕಾರ್ಯದರ್ಶಿ ಶ್ರೀ ಮೋಹನ ಹೂಗಾರ ಮಾತನಾಡಿ ಹೂಗಾರ ಸಮುದಾಯದ ಆರ್ಥಿಕ ವ್ಯವಸ್ಥೆ ಸುಧಾರಿಸಲು ಸಹಕಾರ ಕ್ಷೇತ್ರದ ಅವಶ್ಯಕತೆ ಕುರಿತು ತಿಳಿಸಿದರು.
ತಾಲೂಕಾ ಅಧ್ಯಕ್ಷರಾದ ಶ್ರೀ ಮಾರುತಿ ಹೂಗಾರ ಉಪಾಧ್ಯಕ್ಷರಾದ ಶ್ರೀ ಕಾಡೇಶ ಹೂಗಾರ ಇವರು ವೇದಿಯ ಮೇಲೆ ಉಪಸ್ಥಿತರಿದ್ದರು ಇವರೆಲ್ಲರನ್ನು ಸ್ವಾಗತಿಸಿ, ಅಭಿನಂದಿಸಿ, ಸತ್ಕಾರಿಸಲಾಯಿತು. ಗೋಕಾಕ & ಮೂಡಲಗಿ ತಾಲೂಕಿನಿಂದ ಹೂಗಾರ ಸಂಘದ ಸರ್ವ ಸದಸ್ಯರು, ಎಲ್ಲಾ ಹಳ್ಳಿಗಳಿಂದ ಹೂಗಾರ ಗುರವ, ಜೀರ, ಪೂಜಾರ ಸಮಾಜ ಬಾಂಧವರು ಹಿರಿಯರು ಯುವಕರು ಮಹಿಳೆಯರು ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಈ
ಕಾರ್ಯಕ್ರಮವನ್ನು ಚಿದಾನಂದ ಹೂಗಾರ ನಡೆಸಿಕೊಟ್ಟರು. ಶ್ರೀ ಹಣಮಂತ ಹೂಗಾರ ಪ್ರಾಚಾರ್ಯರು ರಾಮದುರ್ಗ, ಇವರು ಸ್ವಾಗತಿಸಿದರು. ಶ್ರೀ ಸದಾನಂದ ಹೂಗಾರ ಗ್ರಂಥಾಪಾಲಕರು ಗೋಕಾಕ ಇವರು ವಂದಿಸಿದರು. ಕಾಯಕ ಶರಣ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಹೂಗಾರ ಸಮಾಜದ ಎಲ್ಲರೂ ಪುಷ್ಪ ನಮನ ಸಲ್ಲಿಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!