ಸಿರುಗುಪ್ಪ : ನಗರದ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಅಶೋಕ್.ಆರ್.ಹೆಚ್, ಅವರು ಜುಲೈ ತಿಂಗಳ 12ನೇ ತಾರೀಖಿನಂದು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯುವ ಬಗ್ಗೆ ಪತ್ರಿಕಾಗೊಷ್ಠಿ ನಡೆಸಿದರು.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಹಳ ವರ್ಷಗಳಿಂದ ಬಾಕಿ ಉಳಿದ ವ್ಯಾಜ್ಯಗಳನ್ನು ಅಂದರೆ ಬಗೆಹರಿಸಿಕೊಳ್ಳಬೇಕಾದ ಪ್ರಕರಣಗಳನ್ನು ಲೋಕಾ ಅದಾಲತ್‌ನಲ್ಲಿ ರಾಜಿ ಅಥವಾ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.
ಅಂದರೆ ಗಂಡ ಹೆಂಡತಿ, ಸಹೋದರರು, ಸಂಬಂಧಿಕರ ನಡುವಿನ ವ್ಯಾಜ್ಯಗಳನ್ನು ಎರಡು ಪಕ್ಷದಿಂದ ಒಪ್ಪಿದಲ್ಲಿ ಮಾತ್ರ ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.
ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ನುರಿತ ಕಾನೂನು ಸಲಹೆಗಾರರ ಮೂಲಕ ವಿಚಾರಣೆ ನಡೆಸಲಾಗುತ್ತದೆ.
ಸಂಧಾನದಿಂದ ಇತ್ಯರ್ಥಪಡಿಸಿಕೊಳ್ಳುವುದರಿಂದ ಸಂಬಂಧಗಳು, ಸ್ನೇಹ, ಪ್ರೀತಿಯು ಗಟ್ಟಿಗೊಳ್ಳುತ್ತದೆ.
ವ್ಯಾಜ್ಯಗಳು ಶೀಘ್ರದಲ್ಲಿ ಇತ್ಯರ್ಥಗೊಳ್ಳುವುದರಿಂದ ಕಕ್ಷಿದಾರರ ಸಮಯವೂ ಉಳಿಯುತ್ತದೆ.
ಆದ್ದರಿಂದ ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವವರು ಸಂಬಂಧಪಟ್ಟ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ.
ಆದಕಾರಣ ಎಲ್ಲಾ ಪತ್ರಿಕಾ ಮಾದ್ಯಮಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಬಗ್ಗೆ ಪ್ರಚುರಪಡಿಸಬೇಕೆಂದು ತಿಳಿಸಿದರು.
ಇದೇ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕ ಶಿವರಾಜ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಉಪ್ಪಾರ್ ವೆಂಕೋಬ, ಕಾರ್ಯದರ್ಶಿ ಶಿವಕುಮಾರಸ್ವಾಮಿ ಹಾಗೂ ವಕೀಲರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




