ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈಗಾಗಲೇ ಭರದ ಸಿದ್ಧತೆ ಆರಂಭವಾಗಿದೆ. ಜಂಬೂ ಸವಾರಿಗೆ ಆನೆಗಳು ಸಹ ಮೈಸೂರಿಗೆ ಬಂದಾಗಿದೆ. ಇದೀಗ ಆನೆಗಳಿಗೆ ದಸರಾ ಜಂಬೂ ಸವಾರಿ ತಾಲೀಮು ಆರಂಭ ಮಾಡಲಾಗಿದೆ.
ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಂದು ಅಭಿಮನ್ಯು ಅಂಬಾರಿ ಹೊರುವುದನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. 70 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಸಾಗುವ ಅಭಿಮನ್ಯುವನ್ನ ಕಣ್ತುಂಬಿಕೊಳ್ಳಲು ಬಹಳ ಸಂತೋಷವಾಗುತ್ತದೆ.
ಆದರೆ ಈ ರೀತಿ ಗಾಂಭೀರ್ಯ ನಡೆಗೆ ಬಹಳಷ್ಟು ತಾಲೂಮು ಅಗತ್ಯವಿರುತ್ತದೆ. ಅದಕ್ಕಾಗಿಯೇ ಬಹಳ ದಿನಗಳ ಮೊದಲೇ ಆನೆಗಳನ್ನ ಮೈಸೂರಿಗೆ ಕರೆತಂದು ತಾಲೀಮು ನೀಡಲಾಗುತ್ತದೆ.. ಇಂದಿನಿಂದ ಆನೆಗಳ ತಾಲೀಮು ಆರಂಭವಾಗಿದ್ದು, ಭಾರ ಹೊತ್ತು ನಡೆಯಲು ತರಬೇತಿ ನೀಡಲಾಗುತ್ತಿದೆ.




