Ad imageAd image

ಗುರು ಹಿರಿಯರು, ತಂದೆ, ತಾಯಿ ಋಣವನ್ನು ಮರೆಯಬೇಡಿ : ಎಚ್‌.ವಿ. ಪಾಟೀಲ

Bharath Vaibhav
ಗುರು ಹಿರಿಯರು, ತಂದೆ, ತಾಯಿ ಋಣವನ್ನು ಮರೆಯಬೇಡಿ : ಎಚ್‌.ವಿ. ಪಾಟೀಲ
WhatsApp Group Join Now
Telegram Group Join Now

ಅಥಣಿ :  ನಮ್ಮ ಬದುಕಿನ ಅಂಧಕಾರವನ್ನು ಕಳೆದು ಸುಜ್ಞಾನ ಎಂಬ ಬೆಳಕನ್ನು ನೀಡಿರುವ ಗುರು ಹಿರಿಯರನ್ನು ಜನ್ಮ ನೀಡಿದ ತಂದೆ ತಾಯಿಯ ಋಣವನ್ನು ನಾವು ಎಂದಿಗೂ ಮರೆಯಬಾರದು ವಿದ್ಯಾರ್ಥಿಗಳು ಎಷ್ಟೇ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡಿದರೂ ಅವರ ಋಣ ಅನುಬಂಧವನ್ನು ಮರೆಯಬಾರದೆಂದು ನಿವೃತ್ತಿ ಶಿಕ್ಷಕರಾದ ಎಚ್‌.ವಿ. ಪಾಟೀಲ ಹೇಳಿದರು.

ಅವರು ಅಥಣಿ ತಾಲೂಕಿನ ಗಡಿ ಭಾಗದಲ್ಲಿರುವ ಅನಂತಪುರ ಗ್ರಾಮದಲ್ಲಿ ಮೇ 4 ರಂದು ಹಮ್ಮಿಕೊಂಡಿರುವ 1997-98ನೇ ಸಾಲಿನ ಏಳನೇ ತರಗತಿ ಉತ್ತೀರ್ಣ ಹೊಂದಿದ ಹಾಗೂ 2000-01 ನೇ ಸಾಲಿನ 10ನೇ ತರಗತಿ ಉತ್ತೀರ್ಣ ಹೊಂದಿದ ಹಳೆ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮಕ್ಕೆ ವಿದ್ಯಾಸರಸ್ವತಿ ದೇವಿಯ ಫೋಟೋ ಪೂಜೆ ಹಾಗೂ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮಿಂದ ಕಲಿತ ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರು ತಂದೆ ತಾಯಿ ಗುರು ಹಿರಿಯರನ್ನು ನಾವು ಎಂದಿಗೂ ಮರೆಯದೇ. ತಾವು ಯಾವುದೇ ಹುದ್ದೆಯಲ್ಲಿ ಇದ್ದರು ತಮ್ಮ ಪ್ರಾಮಾಣಿಕತೆ ಮತ್ತು ಸಮಾಜಮುಖಿ ಸೇವೆಗಳನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ನಂತರ ಹಿಂದಿನ ಹಳೆ ಶಿಕ್ಷಕರು ನಿವೃತ್ತಿ ಶಿಕ್ಷಕರು ಸಿ.ವಿ ಮಠಪತಿ ಮಾತನಾಡಿ ಜೀವನದಲ್ಲಿ ಭೂಮಿ, ಹೆತ್ತ ತಾಯಿ, ಶಿಕ್ಷಣ ಕಲಿಸಿದ ಗುರುವಿನ ಋಣವನ್ನು ಎಂದಿಗೂ ತೀರಿಸಲಾಗದು. ಇವರ ಋಣದ ಭಾರ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅವರ ಸೇವೆ, ಸ್ಮರಣೆ, ಗೌರವ ಸಲ್ಲಿಸುವ, ಪೂಜಿಸುವ ಕಾರ್ಯವನ್ನು ಮಾಡಬೇಕು. ನಮ್ಮ ಬದುಕಿಗೆ ಬೆಳಕಾದವರನ್ನು ನಾವು ಎಂದಿಗೂ ಮರೆಯಬಾರದು. ಶಿಕ್ಷಕರು ಹಾಗೂ ಪಾಲಕರು ಇಂದಿನ ಮಕ್ಕಳಿಗೆ ಆಧುನಿಕ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯವುಳ್ಳ, ಸಂಸ್ಕಾರಯುತ ಶಿಕ್ಷಣವನ್ನು ನೀಡುವುದು ಅಗತ್ಯವಿದೆ ಎಂದು ಹೇಳಿದರು.

ನಂತರ ವಿದ್ಯಾರ್ಥಿಗಳು ಉದ್ದೇಶಿಸಿ ಶಿಕ್ಷಕರಾದ ಚಿದಾನಂದ ಗೋಠೆ ಅವರು ಮಾತನಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ನಮ್ಮ ಭಾಗ್ಯ ಇಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಇಂದು ಸೇವೆ ಸಲ್ಲಿಸುತ್ತಿದ್ದಾರೆ. ಉನ್ನತ ಸ್ಥಾನ ಮಾನಗಳನ್ನು ಹೊಂದಿದ್ದಾರೆ. ಇದು ಈ ಶಾಲೆಗೆ ಹೆಮ್ಮೆಯಾಗಿದೆ ಎಂದು ಹೇಳಿದರು. ಮುಂದೆಯೂ ಕೂಡಾ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಈ ಶಾಲೆಯ ಮತ್ತು ಗ್ರಾಮದ ಹಿರಿಮೆ-ಗರಿಮೆ ಹೆಚ್ಚಿಸುವ ಕೆಲಸ ಮಾಡಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಉಳಿಯಬೇಕೆಂದು ಹೇಳಿದರು.

ಹಿರಿಯ ನಿವೃತ್ತ ಶಿಕ್ಷಕರಾದ ಶ್ರೀ ಬಿ ಆರ್ ವಾಲಿ ಅವರು ಮಾತನಾಡಿ ತಮ್ಮ ವೃತ್ತಿ ಜೀವನದ ನೆನಪುಗಳನ್ನ ಮೆಲುಕು ಹಾಕಿದರು. ದೇವರು, ತಂದೆ ತಾಯಿಯ ಮತ್ತು ಗುರು ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ನನ್ನ ವೃತ್ತಿಜೀವನದ ಈ ಒಂದು ಗುರುವಂದನಾ ಕಾರ್ಯಕ್ರಮ ನನ್ನ ಜೀವನದಲ್ಲಿ ಮರೆಯಲು ಆಗುವುದಿಲ್ಲ ಈ ಕಾರ್ಯಕ್ರಮ ನನ್ನ ಜೀವನ ಬದುಕು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಲಾಷೆ ವ್ಯಕ್ತಪಡಿಸಿದರು.

ನಮ್ಮ ವೃತ್ತಿಜೀವನದ ಬದುಕಿನಲ್ಲಿ ನಮ್ಮನ್ನು ಗುರುತಿಸಿ ಈ ಒಂದು ವೇದಿಕೆಗೆ ತಂದು ಸನ್ಮಾನವನ್ನು ಮಾಡಿ ನಮ್ಮ ಮೇಲೆ ದೊಡ್ಡ ಭಾರ ಮಾಡಿದ್ದೀರಿ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಬದುಕಿನಲ್ಲಿ ದೇವರು ಆಯುರ್ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಜಿ. ಎಲ್. ತುಪ್ಪದ ಗುರುಗಳು ಗುರುವಂದನಾ ಕಾರ್ಯಕ್ರಮದ ಕುರಿತು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ ದೇಶಿಂಗೆ ಮತ್ತು ಶ್ರೀಮತಿ ಎಂ ಆರ್ ಪಾಟೀಲ್ ಶ್ರೀಮತಿ ಬಿ.ಎನ್‌ ಅವಟಿ ವಿದ್ಯಾರ್ಥಿಗಳ ಕುರಿತು ಮಾತನಾಡಿ ಮೆಚ್ಚುಗ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳಲ್ಲಿ ರಾಜು ಬಡಿಗೇರ ಅವರು ಗುರುವಂದನಾ ಕಾರ್ಯಕ್ರಮದ ಮಹತ್ವವನ್ನು ವಿವರವಾಗಿ ತಿಳಿಸಿದರು

ಈ ಕಾರ್ಯಕ್ರಮವು ಸುಗಮವಾಗಿ ಸಾಗಲು ಪ್ರಾರ್ಥನಾ ಗೀತೆಯನ್ನು ಶ್ರೀಮತಿ ಸುಜಾತಾ ಇರಳಿ ನೆರವೇರಿಸಿದರು. ಶ್ರೀಮತಿ ಮಹಾದೇವಿ ಇರಳಿ ಹಾಗೂ ಸಂಗಡಿಗರು ಸ್ವಾಗತ ಗೀತೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ವಿ ಕುಲಕರ್ಣಿ. ಎಸ್. ಎ. ಹೊನವಾಡ ಎಸ್ ಬಿ ನೇಮಗೌಡ. ಎಸ್. ಎನ್ ಯಾದವ. ಎ.ಪಿ. ಕುಂಟೋಜಿ. ಎ.ಡಿ ಸೂರ್ಯವಂಶಿ. ಎ. ಎಂ. ಹೊನಕಾಂಡೆ. ಎಸ್. ಬಿ. ತೊದಲಬಾಗಿ ಕೆ.ಎಸ್. ಬುರ್ಲಿ. ಎಸ್. ಎಂ .ಹಲಗಿ. ಎ. ಎಮ್ ಗಸ್ತಿ. ಶ್ರೀಮತಿ ಎಲ್. ಬಿ ಹಿಟ್ಟನಹಳ್ಳಿ. ಬಿ.ಕೆ ಕಾಂಬಳೆ. ಹುಸೇನ್ ಗೋತ್ವಾಲ ಹಾಗೂ ಊರಿನ ಗಣ್ಯರಾದ ರುದ್ರಗೌಡ ಪಾಟೀಲ, ಸಂಗಪ್ಪ ಜಾಬಗೌಡರ, ಭೀಮಣ್ಣ ದೇಶಿಂಗೆ, ಶಿವಾನಂದ ಖೋತ, ಶಿವಾನಂದ ಪಾಟೀಲ ಹಾಗೂ ಮಲ್ಲು ಪಡಸಲಗಿ ಕಾರ್ಯಕ್ರಮದ ಬಗ್ಗೆ ಅಪಾರ ಮೆಚ್ಚುಗೆಯನ್ನ ವ್ಯಕ್ತಪಡಿಸಿ ನಮ್ಮ ಗ್ರಾಮದಲ್ಲಿ ಇದು ಒಂದು ಅವಿಸ್ಮರಣೆಯ ಕಾರ್ಯಕ್ರಮ ಈ ಕಾರ್ಯಕ್ರಮವನ್ನು ಏರ್ಪಡಿಸಿದ ಗೆಳೆಯರ ಬಳಗಕ್ಕೆ ಅಭಿನಂದನೆಗಳನ್ನ ತಿಳಿಸಿದರು.

ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಶೇಖರ ತೇಲಿ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಬಡಿಗೇರ ನಿವೃತ್ತ ಸೈನಿಕರಾದ ಗಜಾನಂದ ದೇಶಿಂಗೆ, ಪ್ರಗತಿಪರ ರೈತರಾದ ರುದ್ರಗೌಡ ಪಾಟೀಲ, ಉಮೇಶ ಗುಜುರೇ, ಸಿವಿಲ್ ಇಂಜಿನಿಯರ್ ಆದ ಬಸವರಾಜ ಪಾಟೀಲ, ಅರುಣ ಎಳ ಮಲ್ಲೆ, ಲಹು ಸುತಾರ, ಉಮೇಶ ಪೋತದಾರ, ಸುರೇಶ ಮುಳ್ಳಟ್ಟಿ, ಗಜಾನಂದ ಹಲ್ಯಾಳೆ, ರವಿ ಇರಳಿ ಸಂಜಯ ಮೇತ್ರಿ, ಪ್ರಕಾಶ ಪೂಜಾರಿ,ಅಶೋಕ ದೇಸಿಂಗೆ, ಬಸಮ್ಮ ಮೇತ್ರಿ, ಸುನಂದಾ ಶಗಣಿ, ಮಹಾದೇವಿ ಇರಳಿ, ಅಕ್ಕತಾಯಿ ಪಾಟೀಲ, ವಾಣಿ ಪಾಟೀಲ, ಶೋಭಾ ಪಾಟೀಲ, ರಾಜೇಶ್ವರಿ ಕೋರೆ, ಸೀಮಾ ಬಿರಾದಾರ, ನಿರ್ಮಲ ಬುರ್ಲಿ ಹಾಗೂ ಇನ್ನಿತರ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಗಂಗಾಧರ ಗದ್ಯಾಳ ನಿರೂಪಿಸಿದರು ಶ್ರೀಕಾಂತ ಮೇತ್ರಿ ಸ್ವಾಗತಿಸಿದರು. ರಾಜು ವಾಘಮಾರೆ ವಂದಿಸಿದರು.

ವರದಿ  : ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!