ಸಿಂಧನೂರು: ಅ ೩೦,ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದ್ದು ಸೇರಿದಂತೆ ದುಂಡಾಣು ವೈರಸ್ ನಿಂದ ರೈತರ ಜೀವನ ಅತಂತ್ರಕ್ಕೆ ಸಿಲುಕಿದ್ದು ರೈತರು ಬೆಳೆದ ಭತ್ತವು ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದ್ದು ಇಂತಹ ಸಮಯದಲ್ಲಿ ಸರ್ಕಾರವು ರೈತರ ನೆರವಿಗೆ ಧಾವಿಸಬೇಕಾಗಿತ್ತು ಅದುಬಿಟ್ಟು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ರೈತರ ಶಾಪ ತಟ್ಟುವುದು ಶತಸಿದ್ದ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಬಿಜೆಪಿ ಮುಖಂಡ ಕೆ. ಕರಿಯಪ್ಪ
ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕನ್ನಯ್ಯನಾಯ್ಡು ಅವರು ತುಂಗಭದ್ರಾ ಕ್ರಸ್ಟ್ ಗೇಟ್ ಅಳವಡಿಸುವುದಕ್ಕೆ ಕೇವಲ ೩ ತಿಂಗಳು ಸಾಕು ಎರಡನೇ ಬೆಳೆಗೆ ನೀರು ಬಿಡಬಹುದು ಎಂದು ಸರ್ಕಾರಕ್ಕೆ ಲಿಖಿತ ಹೇಳಿಕೆ ಕೊಟ್ಟರು.
ಕೂಡ ಸಚಿವ ಶಿವರಾಜ ತಂಗಡಗಿಯವರು ತಾವೆ ನುರಿತ ತಜ್ಞರಂತೆ ಎರಡನೇ ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಘಂಟಘೋಷವಾಗಿ ಹೇಳುತ್ತಿರುವುದು ಸಮಂಜಸವಲ್ಲ ಜೊತೆಗೆ ಕಳಪೆ ಬೀಜ, ದುಂಡಾಣು ವೈರಸ್, ಹಾಗೂ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆಯೂ ನಾಶವಾಗಿದ್ದು ಸೂಕ್ತವಾದ ಸಮೀಕ್ಷೆ ನಡೆಸದೆ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ ಕೂಡಲೇ ರೈತರಿಗೆ ಪರಿಹಾರ ಹಾಗೂ ಎರಡನೇ ಬೆಳೆಗೆ ನೀರು ಬಿಡಬೇಕು ತಪ್ಪಿದರೆ ಹೋರಾಟ ಅನಿವಾರ್ಯ ಎಂದರು
ಈ ವೇಳೆ: ರೈತ ಮೋರ್ಚ ಜಿಲ್ಲಾಧ್ಯಕ್ಷ ಸಿದ್ದನಗೌಡ ನೆಲಹಾಳ, ಸಿಂಧನೂರು ನಗರ ಘಟಕದ ಅಧ್ಯಕ್ಷ ಸಿದ್ರಾಮೇಶ ಮನ್ನಾಪೂರು, ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ್, ಶಿವಲಿಂಗಯ್ಯಸ್ವಾಮಿ, ಮಲ್ಲಿಕಾರ್ಜುನ ಕಾಟಗಲ್, ವಿಶ್ವನಾಥ ಚೌದ್ರಿ, ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಇದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




