Ad imageAd image

ಕೆ.ಎಲ್. ರಾಹುಲ್, ಸಾಯಿ ಸುದರ್ಶನ್ ಶತಕ

Bharath Vaibhav
ಕೆ.ಎಲ್. ರಾಹುಲ್, ಸಾಯಿ ಸುದರ್ಶನ್ ಶತಕ
WhatsApp Group Join Now
Telegram Group Join Now

————————————————ಭಾರತ ‘ಎ’ ಗೆ 5 ವಿಕೆಟ್ ಗಳ ಸುಲಭ ಜಯ

ಲಕ್ನೋ: ಪ್ರವಾಸಿ ಆಸ್ಟ್ರೇಲಿಯಾ ಎ, ವಿರುದ್ಧ ಇಂದಿಲ್ಲಿ ಮುಕ್ತಾಯವಾದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಭಾರತ ‘ಎ’ ತಂಡ ಎರಡು ಟೆಸ್ಟ್ ಗಳ ಸರಣಿಯನ್ನು 1-0 ರಿಂದ ಗೆದ್ದುಕೊಂಡಿತು.

ಇಲ್ಲಿನ ಶ್ರೀ ಭಾರತ ರತ್ನಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪಂದ್ಯದ ನಾಲ್ಕನೇ ದಿನ 5 ವಿಕೆಟ್ ಗೆ 413 ರನ್ ಗಳಿಸಿದ ಭಾರತ ಎ’  ತಂಡವು ಸುಲಭವಾಗಿ ಪಂದ್ಯ ಗೆದ್ದುಕೊಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಎ’ಗೆ ದೊಡ್ಡ ಮೊದಲ ಇನ್ನಿಂಗ್ಸ್ ಮುನ್ನಡೆ ಸಿಕ್ಕಿದ್ದರೂ ಭಾರತ ಎ’ ತಂಡದ ಬೌಲರುಗಳು ಆಸ್ಟ್ರೇಲಿಯಾ ಎ’ ತಂಡವನ್ನು 185 ರನ್ ಗಳಿಗೆ ಕಡಿವಾಣ ಹಾಕಿದರು.

ಭಾರತ ಎ’ ತಂಡದ ಬ್ಯಾಟ್ಸಮನ್ ಗಳು ಕೂಡ ಎರಡನೇ ಇನ್ನಿಂಗ್ಸ್ ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿಶೇಷವಾಗಿ ಕೆ.ಎಲ್. ರಾಹುಲ್ ಅಜೇಯ 176 ರನ್ ಗಳನ್ನು ಗಳಿಸಿದರು. 16 ಬೌಂಡರಿ, 4 ಸಿಕ್ಸರ್ ಸಿಡಿಸಿದ ರಾಹುಲ್ ತಂಡದ ಗೆಲುವಿನ ರೂವಾರಿಯಾದರು. ಸಾಯಿ ಸುದರ್ಶನ್ ಸರಿಯಾಗಿ 100 ರನ್ ಗಳ ಶತಕ ಸಿಡಿಸಲು 9 ಬೌಂಡರಿ, 1 ಸಿಕ್ಸರ್ ರ ನೆರವು ಪಡೆದರು. ದ್ರುವ್ ಜುರೇಲ್ 56 ರನ್ ಗಳ ಆಕರ್ಷಕ ಅರ್ಧ ಶತಕ ಗಳಿಸಿದರು.

ಸ್ಕೋರ್ ವಿವರ

ಆಸ್ಟ್ರೇಲಿಯಾ 420 ಮತ್ತು 185

ಭಾರತ ಎ, 194  ಹಾಗೂ 5 ವಿಕೆಟ್ ಗೆ 413

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!