ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಮಹಾಂತೇಶ ಇಂದು ಬೆಂಗಳೂರಿನಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಕೇಂದ್ರ ಕಚೇರಿಯಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷರು ಜಿ.ಟಿ.ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಆರ್. ಶಿಲ್ಪಾ ಅವರನ್ನು ಮೊದಲ ಬಾರಿಗೆ ಭೇಟಿ ಮಾಡುವ ಮೂಲಕ ಅಭಿನಂದನೆ
ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರೊಂದಿಗಿನ ಈ ಸೌಹಾರ್ದ ಮಾತುಕತೆಯಲ್ಲಿ ಕಂಪನಿಯ ಚಿನ್ನ ಉತ್ಪಾದನೆ ಹೆಚ್ಚಳ ಹಾಗೂ ಸಿಬ್ಬಂದಿ ಮತ್ತು ಕಾರ್ಮಿಕರ ಬಹುಮುಖ್ಯ ಬೇಡಿಕೆಗಳಾದ ಮೆಡಿಕಲ್ ಅನ್ ಫಿಟ್, ಖಾಲಿ ಹುದ್ದೆಗಳ ಭರ್ತಿ, ಬಾಕಿಯಿರುವ ಮನೆ ಬಾಡಿಗೆ ಭತ್ಯೆ, ಕ್ಯಾಂಟೀನ್ ಸೇರಿದಂತೆ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರು ಅನೇಕ ಸೌಕರ್ಯಗಳನ್ನು ಒದಗಿಸಬೇಕು. 1000 ಮನೆಗಳ ನಿರ್ಮಾಣ ಹಾಗೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಯೋಜನೆ ಜಾರಿಗಾಗಿ ತ್ವರಿತಗತಿಯ ಕ್ರಮಗಳನ್ನು ವಹಿಸಬೇಕೆಂದು
ಅಧ್ಯಕ್ಷರು ಪ್ರಸ್ತಾಪಿಸಿದ ವೀಶೇಷವಾಗಿ ಮೆಡಿಕಲ್ ಅನ್ ಫಿಟ್, ಹೆಚ್ ಆರ್ ಎ.ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸಕರಾತ್ಮಕವಾಗಿ ಸ್ಪಂದನೆ ನೀಡಿದರು. ಖಾಲಿ ಭರ್ತಿ ಹಾಗೂ ಬಡ್ತಿ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಒಳ ಮೀಸಲಾತಿ ಕುರಿತು ಕ್ರಮವಹಸಿದ ಬಳಿಕ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗುತ್ತಿದೆ.
ಇದಲ್ಲದೇ ಕಾರ್ಮಿಕ ಸಂಘವು ಮಂಡಿಸಿರುವ ಹಲವು ಬೇಡಿಕೆಗಳು ಮತ್ತು ಕಂಪನಿಯ ಉತ್ಪಾದಕತೆ ಗುರಿಯನ್ನು ತಲುಪುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚುನಾಯಿತ ಕಾರ್ಮಿಕ ಸಂಘದೊಂದಿಗೆ ಜೊತೆ ಜುಲೈ 9 ರಂದು ಹಟ್ಟಿಗೆ ಭೇಟಿ ನೀಡಿ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು ಎನ್ನಲಾಗುತ್ತಿದೆ
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ರಮೇಶ ವೀರಾಪೂರು ಉಪಸ್ಥಿತರಿದ್ದರು.




