Ad imageAd image

ಹೊಲ್ಸ್ಲ್ ವೆಜ್ ಮಾರ್ಕೆಟ್ ತರಕಾರಿ ಮತ್ತು ಹಣ್ಣು ಹಂಪಲು ಮಳಿಗೆ ಉದ್ಘಾಟಿಸಿದ  ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್

Bharath Vaibhav
ಹೊಲ್ಸ್ಲ್ ವೆಜ್ ಮಾರ್ಕೆಟ್ ತರಕಾರಿ ಮತ್ತು ಹಣ್ಣು ಹಂಪಲು ಮಳಿಗೆ ಉದ್ಘಾಟಿಸಿದ  ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್
WhatsApp Group Join Now
Telegram Group Join Now

ಬೆಂಗಳೂರು: ಈ ವೆಜ್ ಮಾರ್ಕೆಟ್ ದಲ್ಲಿ ವಿವಿಧ ಬಣ್ಣದ ತರಕಾರಿಗಳು ಹಣ್ಣುಗಳು ವಿಭಿನ್ನ ಪೋಷಕಾಂಶಗಳು ಹೊಂದಿದ ಅವುಗಳ ವೈವಿಧ್ಯಮಯ ಸೇವನೆಯಿಂದ ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ಅದಲ್ಲದೆ ಮಲಬದ್ಧತೆಯನ್ನು ತಡೆಗಟ್ಟುತ್ತದೆ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ ಎಂದು ಮಾಜಿ ಪಾಲಿಕೆ ಸದಸ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ ನಾಗಭೂಷಣ್ ಹೇಳಿದರು.

ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಮ್ಮಗೊಂಡನಹಳ್ಳಿಯ ಪಾರೆಸ್ಟ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ “ವೆಜ್ ಮಾರ್ಕೆಟ್” (ತರಕಾರಿ ಮತ್ತು ಹಣ್ಣು) ಮಳಿಗೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿದ ಅವರು ಪೂರ್ಣ ಹಣ್ಣು ತಿನ್ನ ಬೇಕು ಆದರೆ ಹಣ್ಣಿನ ರಸ ದೇಹಕ್ಕೆ ಉತ್ತಮ ಅಲ್ಲ ಏಕೆಂದರೆ ಹಣ್ಣಿನ ರಸಗಳಲ್ಲಿ ಫೈಬರ್ ಕಡಿಮೆ ಇರುತ್ತದೆ ಮತ್ತು ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ದಿನಕ್ಕೆ ಹಲವಾರು ರೀತಿಯ ಹಣ್ಣುಗಳನ್ನು ತಿನ್ನಬೇಕು ಈ ವೆಜ್ ಮಾರ್ಕೆಟ್ ದಲ್ಲಿ ತರಕಾರಿ ಮತ್ತು ಹಣ್ಣು ಸಿಗುವ ವ್ಯವಸ್ಥೆ ಮಾಲೀಕರು ಮಾಡಿದ್ದಾರೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜನರನ್ನು ಉದ್ದೇಶಿಸಿ ತರಕಾರಿ ಹಣ್ಣು ವಿಕ್ಷೀಸಿ ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ತರಕಾರಿ ಹಣ್ಣು ವಿಕ್ಷೀಸಿ ಮಾತಾಡಿದರು.

ಈ ಸಂದರ್ಭದಲ್ಲಿ ಪೂಜಾ ಜ್ಯುವೆಲರ್ಸ್ ಮಾಲೀಕ‌ರಾಕೇಶ್, ವೆಜ್ ಮಾರ್ಕೆಟ್ ಮಾಲೀಕರು ಸಿಬಂದಿ ವರ್ಗದವರು ಕಮ್ಮಗೊಂಡನಹಳ್ಳಿ ಸಮಸ್ತ ನಾಗರಿಕರು ಮತ್ತು ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಅವರ ಬೆಂಬಲಿಗರು ಇದ್ದರು.
ವರದಿ: ಅಯ್ಯಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!