ನವದೆಹಲಿ: ನಾನು ಹಾಗೂ ಸೈಫ್ ಅಲಿಖಾನ್ ಇಬ್ಬರೂ ಜೊತೆಯಲ್ಲಿಯೇ ಅಡುಗೆ ಮಾಡುವುದನ್ನು ರೂಢಿಸಿಕೊಂಡಿದ್ದೇವೆ ಎಂದು ಖ್ಯಾತ ನಟಿ ಕರಿನಾ ಕಪೂರ ಹೇಳಿದ್ದಾರೆ.
ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಒತ್ತಡದ ಸಂದರ್ಭದಲ್ಲಿ ನಾವಿಬ್ಬರೂ ಕೂಡಿ ಅಡುಗೆ ಮಾಡಿಕೊಂಡು ಊಟ ಮಾಡುತ್ತೇವೆ ಇದರಿಂದ ಮನಸ್ಸು ನಿರಾಳವಾಗುತ್ತದೆ. ಅವರು (ಸೈಫ್ ಅಲಿಖಾನ್) ಉತ್ತಮವಾಗಿ ಅಡುಗೆ ಮಾಡುತ್ತಾರೆ. ಆದರೆ ನನಗೆ ಮೊಟ್ಟೆ ಬೇಯಿಸಲು ಕೂಡ ಬರುವುದಿಲ್ಲ ಎಂದು ಕರೀನಾ ಕಪೂರ ತಿಳಿಸಿದರು.
ನನಗೆ ಕಿಚಡಿ ಅಂದರೆ ಬಹಳ ಇಷ್ಟ ಅದರ ತುಪ್ಪ ಹಾಕಿಕೊಂಡ ತಿಂದರೆ ಇನ್ನು ಉತ್ತಮ. ಸೈಫ್ ಎಲ್ಲ ತರಹದ ಅಡುಗೆ ಮಾಡುತ್ತಾರೆ. ನನಗೆ ಮೊಟ್ಟೆ ಬೇಯಿಸಲು ಕೂಡ ಬರುವುದಿಲ್ಲ ಎಂದು ಖ್ಯಾತ ಚಿತ್ರನಟಿ ಹೇಳಿದ್ದಾರೆ.