ಹುಕ್ಕೇರಿ :ರಾಜ್ಯದಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸುವದಕ್ಕಿಂತ ಖಾಲಿ ಇರುವ ಸ್ಥಳಗಳಲ್ಲಿ ನ್ಯಾಯಾಧೀಶರನ್ನು ಭರ್ತಿ ಮಾಡುವದು ಅವಶ್ಯಕವಾಗಿದೆ ಎಂದು ಹುಕ್ಕೇರಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಡಪ್ಪಾ ಕುರಬೇಟ ಹೇಳಿದರು.
ಹುಕ್ಕೇರಿ ನ್ಯಾಯಾಲಯದ ವಕೀಲರ ಸಂಘದ ಎರಡನೇ ಅವಧಿಗೆ ಅದ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಕೆ ಬಿ ಕುರಬೇಟ ಇವರ ಅಧಿಕಾರ ಸ್ವೀಕಾರ ಸಮಾರಂಭವನ್ನು ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ನ್ಯಾಯಾಧೀಶ ಕೆ ಎಸ್ ರೊಟ್ಟೆರ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನ್ಯಾಯಾಧೀಶ ಕೆ ಎಸ್ ರೊಟ್ಟೆರ ಮಾತನಾಡಿ ನೂತನ ಅದ್ಯಕ್ಷರು ಮತ್ತು ಪದಾಧೀಕಾರಿಗಳು ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಸಹಕಾರ ನೀಡಿ ಜನರಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಬೇಕು ಮಾರ್ಚ 8 ರಂದು ಜರಗಲಿರುವ ಲೋಕ ಅದಾಲತ್ ದಲ್ಲಿ ಹೆಚ್ಚು ಪ್ರಕರಣಗಳು ಇತ್ಯರ್ತವಾಗಲಿ ಎಂದು ಹೇಳಿದರು .
ನಂತರ ನ್ಯಾಯಾಧೀಶರು ನೂತನ ಅಧ್ಯಕ್ಷರಿಗೆ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು. ವೇದಿಕೆ ಮೇಲೆ ರಾಜ್ಯ ವಕೀಲ ಪರಿಷತ್ ಉಪಾದ್ಯಕ್ಷ ವಿನಯ ಮಾಂಗಳೆಕರ, ಸದಸ್ಯ ಕೆ ಬಿ ನಾಯಿಕ, ನ್ಯಾಯವಾದಿಗಳಾದ ರಾಮಚಂದ್ರ ಜೋಶಿ, ಬಸು ಜಿನರಾಳೆ, ಎಸ್ ಜೆ ನದಾಫ್, ವಿಠ್ಠಲ ಘಸ್ತಿ, ಅಂಬರಿಶ ಬಾಗೇವಾಡಿ, ಅನಿತಾ ಕುಲಕರ್ಣಿ, ಪ್ರಕಾಶ ಪಾಟೀಲ, ಎ ಎಸ್ ಹುಲ್ಲೋಳ್ಳಿ ಉಪಸ್ಥಿತರಿದ್ದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಕೆ ಬಿ ಕುರಬೇಟ ನಮ್ಮ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ನೀಡಬೇಕಾದರೆ ನಮ್ಮ ರಾಜ್ಯದಲ್ಲಿ ನ್ಯಾಯಾಧೀಶ ಕೊರತೆ ಇತೆ ಕಾರಣ ರಾಜ್ಯ ಸರ್ಕಾರ ಕೂಡಲೆ ನೂತನ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಹಾಗೂ ಕಿರಿಯ ವಕೀಲರಿಗೆ ಹೋಸ ಕಾನೂನುಗಳ ಬಗ್ಗೆ ಕಾರ್ಯಾಗಾರ ಹಮ್ಮಿಕೋಳ್ಳಬೆಕು ಮತ್ತು ನ್ಯಾಯಾಲಯಗಳಿಗೆ ಮೂಲ ಭೂತ ಸೌಲಭ್ಯಗಳನ್ನು ನೀಡ ಬೇಕು ಈ ಎಲ್ಲಾ ಕಾರ್ಯಗಳು ಜರುಗಿದರೆ ಮಾತ್ರ ನಮ್ಮ ಕಕ್ಷಿದಾರನಿಗೆ ತ್ವರಿತವಾಗಿ ನ್ಯಾಯ ದೊರಕಿಸ ಬಹುದು ,ಮುಂಬರುವ ಮಾರ್ಚ 8 ರಂದು ಜರಗಲಿರುವ ಲೋಕ ಅದಾಲತ್ ದಲ್ಲಿ ಮೊದಲನೆಯದಾಗಿ ಒಂದು ಅಪಘಾತ ಪ್ರಕರಣವನ್ನು ಸಂದಾನದ ಮೂಲಕ ಇತ್ಯರ್ಥ ಮಾಡಲು ನ್ಯಾಯಪೀಠಕ್ಕೆ ನಿಡಲಾಗುವದು ಎಂದರು.
ನಂತರ ಸಂಕೇಶ್ವರ ನ್ಯಾಯವಾದಿಗಳ ಸಂಘದ ಅದ್ಯಕ್ಷ ಅರವಿಂದ ಮಗದುಮ್ಮ ಮತ್ತು ಪದಾಧೀಕಾರಿಗಳು,ಮಾಜಿ ಸಚಿವ ಎ ಬಿ ಪಾಟೀಲ ಹಾಗೂ ಪಂಚಮಸಾಲಿ ಹೋರಾಟ ಸಮಿತಿ ಸದಸ್ಯರು ,ಮದಮಕ್ಕನಾಳ, ಮದಿಹಳ್ಳಿ ಗ್ರಾಮಸ್ಥರು ಸೇರಿದಂತೆ ಕುರಬೇಟ ಅಭಿಮಾನಿಗಳು ನೂತನ ಅದ್ಯಕ್ಷರಿಗೆ ಸನ್ಮಾನ ಜರುಗಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಪಿ ಆರ್ ಚೌಗಲಾ, ಬಿ ಆರ್ ಚಂದರಗಿ, ಅನಿಲ ಶೇಟ್ಟಿ, ಸಂಜು ನಾಗನೂರಿ, ಎಮ್ ಎಮ್ ಪಾಟೀಲ, ಎಚ್ ಎಲ್ ಪಾಟೀಲ, ಪಿ ಎ ಪಲ್ಲೇದ, ಬಿ ಬಿ ಬಾಗಿ, ಸಿ ಎಂ ಸಂಸುದ್ದಿ, ವೀರಪಾಕ್ಷ ಹಳಿಜೋಳ ಮೊದಲಾದವರು ಉಪಸ್ಥಿತರಿದ್ದರು.
ವರದಿ:ಶಿವಾಜಿ ಎನ್ ಬಾಲೇಶಗೋಳ




