————————————ಗೋವಿನ ಕಾಲು ಕಡೆದ ಪ್ರಕರಣ
ಬೆಳಗಾವಿ: ಕೊಪ್ಪಳ ಜಿಲ್ಲೆಯಲ್ಲಿ ದೇವರಿಗೆ ಬಿಟ್ಟ ಗೋವಿನ ಕಾಲು ಕಡೆದ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮುಪ್ಪಿನ ಕಾಡಸಿದ್ದೇಶ್ವರ ಸೇವಾ ಸಮಿತಿಯು ಇಂದು ನಗರದಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿತು.
ಗೋವಿನ ಕಾಲು ಕಡೆದು ದುಷ್ಕೃತ್ಯ ಮೆರೆದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕೆಂದು ಮುಪ್ಪಿನ ಕಾಡಸಿದ್ದೇಶ್ವರ ಮಠದ ಶ್ರೀಗಳು, ಅಂಕಿ ಸಂಖ್ಯಾತಜ್ಞರಾದ ಡಾ. ಎನ್. ಪ್ರಶಾಂತರಾವ್, ವಕೀಲರಾದ ಸುಭಾಷ್ ಬೊಸ್ಲೇ, ಮುತ್ತಪ್ಪ ಪೂಜಾರಿ ( ಮೂಳೆ) ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಆಗ್ರಹ ಪಡಿಸಿದರು.




