ಕಾಗವಾಡ: ಇತ್ತೀಚೆಗೆ ಉಗಾರ ಬುದ್ರುಕ ಗ್ರಾಮದಲ್ಲಿ ನ್ಯಾಯವಾದಿ ಪ್ರದೀಪ ಕಿರಣಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿ ನಾಟಕವಾಡಿದ ಸುದ್ದಿ ತಿಳಿದ ಶಾಸಕ ರಾಜು ಕಾಗೆ ಕೊಲೆಯಾದ ಚೈತಾಲಿ ಮನೆಗೆ ಬುಧವಾರ ಭೇಟಿ ನೀಡಿ ಅವರ ತಂದೆ ಅಣ್ಣಾಸಾಬ ಮಾಳಿ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇನ್ನು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಕಠಿಣ ಹಾಗೂ ಜೀವಾವಧಿ ಶಿಕ್ಷೆಗೆ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಗ್ರಾಮದ ಮುಖಂಡ ವಸಂತ ಖೋತ, ಶೀತಲ ಕುಂಬಾರ, ಮುರಗೇಶ ಕುಂಬಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಚಂದ್ರಕಾಂತ ಕಾಂಬಳೆ




