Ad imageAd image

ಕಾಗವಾಡ ಪೋಲಿಸ್ ಠಾಣೆ ಗಣೇಶ ಮತ್ತು ಈದ್ ಮಿಲಾದ್ ಸಾರ್ವಜನಿಕ ಶಾಂತಿ ಸಭೆ

Bharath Vaibhav
ಕಾಗವಾಡ ಪೋಲಿಸ್ ಠಾಣೆ ಗಣೇಶ ಮತ್ತು ಈದ್ ಮಿಲಾದ್ ಸಾರ್ವಜನಿಕ ಶಾಂತಿ ಸಭೆ
WhatsApp Group Join Now
Telegram Group Join Now

ಕಾಗವಾಡ: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಕಾಗವಾಡ ತಾಲೂಕಿನ ಗಣೇಶ ಮಂಡಳಿಗಳು ಹಾಗೂ ಸಾರ್ವಜನಿಕರು ಹಬ್ಬವನ್ನು ಶಾಂತಿಯುತ ಮತ್ತು ನಿಯಮಾನುಸಾರ ಆಚರಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿದೆ.

ಕಾಗವಾಡ ಪಟ್ಟಣದ ಮಲ್ಲಿಕಾರ್ಜುನ್ ವಿದ್ಯಾಲಯ ನಡೆದ ಶಾಂತಿ ಸಭೆಯಲ್ಲಿ, ಗೌರಿ ಗಣೇಶ ಹಾಗೂ ಮುಸ್ಲಿಂ ಸಮುದಾಯದ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ, ಎಲ್ಲಾ ಆಯೋಜಕರು ಹಾಗೂ ಸಾರ್ವಜನಿಕರಿಗೆ ಸಲಹೆ ನೀಡಲಾಯಿತು.

ಪೊಲೀಸರ ಸೂಚನೆಗಳು ಹೀಗಿವೆ : ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ: ಪೆಂಡಾಲ್, ವಿದ್ಯುತ್ ಸಂಪರ್ಕ ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದ ಎಲ್ಲಾ ಪರವಾನಗಿಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಮುಂಚಿತವಾಗಿ ಪಡೆಯಬೇಕು.

ಸಾರ್ವಜನಿಕ ಸುರಕ್ಷತೆ: ಗಣೇಶ ಮಂಡಳಿಗಳು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು.

ಪರಿಸರ ಸಂರಕ್ಷಣೆ : ಮೂರ್ತಿಗಳ ಗಾತ್ರ ಮತ್ತು ವಸ್ತು ಪರಿಸರ ಸ್ನೇಹಿಯಾಗಿರಬೇಕು, ಹಾಗೂ ವಿಸರ್ಜನೆ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ನಡೆಯಬೇಕು.

ಶಬ್ದ ನಿಯಂತ್ರಣ : ಧ್ವನಿವರ್ಧಕ ಬಳಕೆ ನಿಯಮಿತ ಸಮಯಕ್ಕೆ ಮಾತ್ರ ಸೀಮಿತವಾಗಿರಬೇಕು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈದ್ ಮಿಲಾದ್ ಹಬ್ಬದ ವೇಳೆಯೂ ಶಾಂತಿಯುತ ವಾತಾವರಣ ಕಾಪಾಡಿಕೊಳ್ಳುವಂತೆ ಕರೆ ನೀಡಿದ ಪೊಲೀಸರು, ಎಲ್ಲ ಸಮುದಾಯಗಳು ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ ಸಿಪಿಐ ಸಂತೋಷ್ ಹಳ್ಳೂರ್ ಡಿವೈಎಸ್ಪಿ ಪ್ರಶಾಂತ್ ಮುನ್ನೊಳೆ ಪಿಎಸ್ಐ ರಾಘವೇಂದ್ರ ಕೋತ್ ಕೆಇಬಿ ದರೀ ಗೌಡ ಅಳ್ಳಿಕಟ್ಟಿ ಕಾಕಾ ಪಾಟೀಲ್ ವಿನಾಯಕ್ ಚೌಗುಲೆ ಸಚಿನ್ ಕೌಟಿಗಿ ಕಾಗವಾಡ ತಾಲೂಕಿನ ಗಣೇಶ್ ಮಂಡಲ ಸದಸ್ಯರು ಪಾಲ್ಗೊಂಡಿದ್ದರು.

ವರದಿ: ಚಂದ್ರಕಾಂತ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!