Ad imageAd image

ಕಾಗವಾಡ ತಾಲ್ಲೂಕು ಮಟ್ಟದ ಪ.ಜಾ., ಪ.ಪಂ. , ಸಮುದಾಯದ ಬಾಂಧವರ ಕುಂದುಕೊರತೆ ಸಭೆ

Bharath Vaibhav
ಕಾಗವಾಡ ತಾಲ್ಲೂಕು ಮಟ್ಟದ ಪ.ಜಾ., ಪ.ಪಂ. , ಸಮುದಾಯದ ಬಾಂಧವರ ಕುಂದುಕೊರತೆ ಸಭೆ
WhatsApp Group Join Now
Telegram Group Join Now

ಕಾಗವಾಡ:  ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳು ಬಹಳಷ್ಟಿದ್ದು, ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಬೇಕೆಂದು ದಲಿತ ಸಮುದಾಯಗಳ ಮುಖಂಡರು ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಿದರು.

ಅವರು ಕಾಗವಾಡ ಪಟ್ಟಣದ ಬಸವ ನಗರದ ಅಂಬೇಡ್ಕರ ಸಭಾ ಭವನದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ, ಚುನಾಯಿತ ಸದಸ್ಯರ, ಪ.ಜಾ., ಪ.ಪಂ. , ಸಮುದಾಯದ ಬಾಂಧವರ ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆದುಕೊಂಡ ದಲಿತ ಮುಖಂಡರು, ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
ಯುವ ಮುಖಂಡ ವಿವೇಕ ಕರಪೆ ಮಾತನಾಡಿ ತಾಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟಿದು . ಬೀಟ್ ವವ್ಯಸ್ಥೆ ಸರಿಯಿಲ್ಲ ದಲಿತ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲದಾಗಿದೆ ಬೀದಿಗಳಲ್ಲಿ ವಿದ್ಯಾರ್ಥಿ ನಿಯರನ್ನು ಚೂಡಾಯಿಸುತ್ತಿದ್ದಾರೆ, ಕಾನೂನು ನಲ್ಲಿ ದಲಿತರಿಗೆ ಮಾತ್ರ ಶಿಕ್ಷ್ಯೆಯಾಗುತ್ತಿದ್ದು,ಕಾನುನು ವವ್ಯಸ್ಥೆಗೆ ಭಂಗ ತರುವವರು ದಲಿತರು ಮಾತ್ರಾನಾ ದಲಿತರನ್ನು ಗುರಿ ಮಾಡಿ ಆಡಳಿತ ಮಾಡುತ್ತಿದಿರಿ ಎಂದು ಆಕ್ರೊಶ ಹೊರಹಾಕಿದರು.
ಮುಂದುವರೆದು ಅಕ್ರಮ ಸರಾಯಿ ಮಾರಾಟ,ಮಟಕಾ,ಜೂಜಾಟ ಜೋರಾಗಿದ್ದು, ಅಬಕಾರಿ ಅಧಿಕಾರಿಗಳೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳು ಬಹಳಷ್ಟಿದ್ದು,ಗ್ರಾಮ ಮಟ್ಟದಲಿ ಸಭೆಗಳನ್ನು ನಡೆಸಿ ಗ್ರಾಮೀಣ ಜನರಿಗೆ ಸರಕಾರದ ಯೋಜನೆಗಳನ್ನು ತಿಳಿಸಬೇಕು ಎಂದರು.

ಜುಗೂಳ ಗ್ರಾಮದ ಎಸ್‌ಸಿ ಸಮುದಾಯದ ಸ್ಮಶಾನ ಭೂಮಿ ವಿವಾದ ತಾರಕಕ್ಕೇರಿದ್ದು, ಕಳೆದ ಅನೇಕ ತಿಂಗಳುಗಳಿಂದ ಈ ಕುರಿತು ಹೋರಾಟ ಮಾಡಿ, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿರುವುದು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯತ ಎದುರಿಗೆ ಶವ ಸಂಸ್ಕಾರ ಮಾಡಲಾಗುವುದು ಎಂದು ಎಸ್‌ಸಿ ಸಮುದಾಯದವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಕೆಲ ಇಲಾಖೆಯ ಅಧಿಕಾರಿಗಳು ಗೈರ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ನೋಟಿಸ್ ನೀಡುವ ಕುರಿತು ನಿರ್ಣಯಿಸಲಾಯಿತು.
ವಾಲ್ಮೀಕಿ ಸಮಾಜ ಮುಖಂಡ ರಮೇಶ ನಾಯಿಕ ಮಾತನಾಡಿ ತಳವಾರ ಸಮಾಜಕ್ಕೆ ಸಿಕ್ಕಿರುವ ಎಸ್‌ಟಿ ಕೆಟಗರಿಯಿಂದಾಗಿ ನಮ್ಮ ಹಕ್ಕುಗಳು ಚ್ಯುತಿ ಉಂಟಾಗುತ್ತಿದೆ ಅಧಿಕಾರಿಗಳು ಸರಕಾರದ ಆದೇಶದಲ್ಲಿನ್ನಿದೆ ಎಂಬುವದನ್ನು ಅಭ್ಯಾಸ ಮಾಡಿ ಕರ್ತವ್ಯ ನಿರ್ವಹಿಸಿ ಸುಖಾಸುಮ್ಮನೆ ಪಕ್ಕದ ತಾಲೂಕಿನಲ್ಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ತಾವು ಸರಕಾರ ಆದೇಶ ಮರೆತು ಜಾತಿ ಪ್ರಮಾಣ ಪತ್ರ ನೀಡಿ ನಮ್ಮ ಹಕ್ಕನ್ನು ಬೇರೆಯವರ ಪಾಲು ಮಾಡಬೇಡಿ ಎಂದು ವಿನಂತಿಸಿದರು. ಅಲ್ಲದೇ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿದರು. ಕಾಗವಾಡ ಪಟ್ಟಣದಲ್ಲಿ ಡಾ.ಬಾಬಾಸಾಹೇಬ ಅಂಬೆಡ್ಕರ ಪುತಳಿ ನಿರ್ಮಾಣ,ಬುದ್ದ ವಿಹಾರ,ಕಟ್ಟಡ,ಐನಾಪುರ,ಶೇಡಬಾಳ,ಮೋಳೆ,ಮಂಗಸೂಳಿ,ಉಗಾರ ,ಸೇರಿದಂತೆ ತಾಲೂಕಿನ ಗ್ರಾಮಗಳ ದಲಿತ ಜನರ ಕುಂದುಕೊರತೆಗಳನ್ನು ಆಲಿಸಿ ಸರ್ಕಾರದ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ತಹಶೀಲ್ದಾರ ನೀಡಿದರು.
ಅಧ್ಯಕ್ಷತೆಯನ್ನು ತಹಶೀಲ್ದಾರ ರಾಜೇಶ ಬುರ್ಲಿ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಯಾದವಾಡ, ಕಾಗವಾಡ ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಡಿಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಶ ಹಳ್ಳೂರ, ತಾ.ಪಂ. ಎಓ ವೀರಣ್ಣಾ ವಾಲಿ, ಬಿಇಓ ಎಂ.ಆರ್. ಮುಂಜೆ, ಉಪತಹಶೀಲ್ದಾರ ರಷ್ಮಿ ಜಕಾತಿ, ಟಿಎಚ್‌ಓ ಡಾ. ಬಸಗೌಡಾ ಕಾಗೆ, ಅಣ್ಣಾಸಾಬ ಕೋರೆ, ಅಬಕಾರಿ ಇಲಾಖೆಯ ಮಹಾಂತೇಶ ಬಂಡಗಾರ, ಪಶು ಇಲಾಖೆಯ ಜ್ಞಾನೇಶ್ವರ ಕಾಂಬಳೆ, ಬಿಸಿಯೂಟದ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಹೆಸ್ಮಾಂ ಎಇಇ ದುರ್ಯೋಧನ ಮಾಳಿ, ಅರಣ್ಯ ಇಲಾಖೆಯ ರಾಕೇಶ ಅರ್ಜುನವಾಡ, ಆಹಾರ ಇಲಾಖೆಯ ಸಂಗಮೇಶ ಬಾಗೇವಾಡಿ, ಕೃಷಿ ಇಲಾಖೆಯ ಕಾಂತಿನಾಥ ಬಿರಾದರ, , ಸಿಡಿಪಿಓ ಮೇಲ್ವಿಚಾರಕಿ ಸುಜಾತಾ ಪಾಟೀಲ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ದಲಿತ ಮುಖಂಡರಾದ ಸಂಜಯ ತಳವಳಕರ, ವಿದ್ಯಾಧರ ಧೊಂಡಾರೆ, ಪ್ರಕಾಶ ಧೊಂಡಾರ, ಉಮೇಶ ಮನೋಜ, ಮಹಾದೇವ ಕಾಂಬಳೆ, ಪ್ರತಾಪ ಕಾಂಬಳೆ, ಹೇಮಂತ ಹಿರೇಮನಿ, ರಾಜು ಹಿರೇಮನಿ, ಪ್ರಮೋದ ಕಾಂಬಳೆ, ಗೋಪಾಲ ಕಾಂಬಳೆ, ರವಿ ಕುರಣೆ, ಬಾಳಾಸಾಬ ಕಾಂಬಳೆ ಸೇರಿದಂತೆ ತಾಲೂಕಿನ ದಲಿತ ಮುಖಂಡರು ಉಪಸ್ಥಿತರಿದ್ದರು.
ಸಭೆಯಲ್ಲಿ ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ದು, ಸಭೆಯ ಕುರಿತು ಅವರಿಗಿರುವ ಕಾಳಜಿಯನ್ನು ಪ್ರದರ್ಶಿಸಿದಂತೆ ಭಾಸವಾಯಿತು.

ವರದಿ :ಮುರಗೇಶ ಗಸ್ತಿ 

WhatsApp Group Join Now
Telegram Group Join Now
Share This Article
error: Content is protected !!