ಸೇಡಂ: ಪಟ್ಟಣದ ಡಾ.ಬಿ ಅರ್ ಅಂಬೇಡ್ಕರ್ ಬಾಲಕರ ವಸತಿ ನಿಲಯದ ಅಂಗಳದಲ್ಲಿ ಸುರಿಯುತ್ತಿರುವ ಮಳೆಯಿಂದ ನಿಲಯದ ಅಂಗಳವು ನೀರು ನಿಂತು ಕೆಸರು ಆಗಿದ್ದು ನಿಲಯದ ವಿದ್ಯಾರ್ಥಿಗಳಿಗೆ ತಿರುಗಾಡಲು ಆಟೋಟಗಳು ಆಡಲು ಮತ್ತು ಶಾಲಾ ಕಾಲೇಜುಗಳಿಗೆ ಹೋಗಲು ಸಮಸ್ಯೆ ಆಗುತ್ತಿದ್ದು ಇದರ ಬಗ್ಗೆ ಅನೇಕ ಬಾರಿ ನಿಲಯದ ಪಾಲಕ, ಮತ್ತು ಸಂಬಂಧ ಪಟ್ಟ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಿದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಈಗಲಾದರೂ ಈ ಸಮಸ್ಯೆಯನ್ನು ಪರಿಹರಿಸಲು ಕೋರುತ್ತಿದ್ದೇವೆ ಇಲ್ಲವಾದಲ್ಲಿ ನಾವು ಮತ್ತು ನಿಲಯದ ವಿದ್ಯಾರ್ಥಿಗಳು ಸೇರಿ ಸಂಬಂಧ ಪಟ್ಟ ಕಾರ್ಯಲಯದ ಮುಂದೆ ಧರಣಿ ಕೂಡುತ್ತೇವೆ ಎಂದು ಎಚ್ಚರಿಕೆ ನೀಡುತಿದ್ದೇವೆ ಎಂದು ಅಂಬೇಡ್ಕರ್ ಯುವ ಸೇನೆ ಮುಧೋಳ್ ಹೋಬಳಿ ಉಪಾಧ್ಯಕ್ಷ ಕೈಲಾಸ್ ಮೌರ್ಯ ತಿಳಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




