ಸೇಡಂ:- ತಾಲೂಕಿನ ಚಂದಪೂರ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಬಡವಾಣೆಯಲ್ಲಿ ಎಸ್,ಸಿ,ಪಿ ಟಿ,ಎಸ್,ಪಿ ಕ್ರಿಯ ಯೋಜನೆಯ ಅನುದಾನದಲ್ಲಿ ಎಸ್,ಸಿ,ಪಿ ಯೋಜನೆಯ ಕಾಮಗಾರಿ ಆಯ್ಕೆಯಾಗಿದ್ದು ಆ ಕಾಮಗಾರಿಯನ್ನು ಅಧಿಕಾರಿಗಳು ವೈಯಕ್ತಿಕವಾಗಿ ತೆಗೆದುಕೊಂಡು ಸಚೀವರ ಕೈಗೊಂಬೆಯಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದರೆ, ಚಂದಪೂರ ಗ್ರಾಮದ Sc ಬಡವಾಣೆಯಲ್ಲಿ ಸಾರ್ವಜನಿಕರು ದಿನನಿತ್ಯವಾಗಿ ಸಂಚರಿಸುವ ಮಾರ್ಗದಲ್ಲಿ ರಸ್ತೆ ಹಾಗೂ ಚರಂಡಿ ಮಾಡಬೇಕೆಂದು ಊರಿನ ಗ್ರಾಮಸ್ಥರ ಸಾರ್ವಜನಿಕರ ಮನವಿಯಾಗಿರುತ್ತದೆ.

ಆದರೆ ಅಧಿಕಾರಿಗಳು ಗ್ರಾಮ ಪಂಚಾಯತಿಯ ಸದಸ್ಯರ ಸಚಿವರ ಮಾತು ಕೇಳಿ ಸದ್ಯಸರ ಮನೆಯ ಅಕ್ಕಪಕ್ಕ ರಸ್ತೆಯನ್ನು ಹಾಕಿರುತ್ತಾರೆ. ಎಸ್,ಸಿ,ಪಿ ಟಿ,ಎಸ್,ಪಿ ಯೋಜನೆಯ ಕಾಮಗಾರಿಗಳು ಬಡವಾಣೆಯ ಅಭಿವೃದ್ದಿಗಾಗಿ ಯೋಜನೆಗಳು ಜಾರಿಗೆ ತಂದಿರುತ್ತಾರೆ ಆದರೆ ಅಧಿಕಾರಿಗಳು ಅದರ ವಿರುದ್ದವಾಗಿ ಕೆಲಸ ಮಾಡಿ ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದರೆ ಎಂದು ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಉಪಾಧ್ಯಕ್ಷರಾದ ಕೈಲಾಸ ಮೌರ್ಯ ರವರು ಇದನ್ನು ತಿವ್ರವಾಗಿ ಖಂಡಿಸುತ್ತೆವೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.




