
ನಟಿ ಕಾಜೋಲ್ ಈಚೆಗೆ ಮುಂಬೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡು ಮಿಂಚಿದರು. ಬಾಲಿನುಡ್ ನ ಹಿರಿಯ ನಟಿ ಕಾಜೋಲ್ ಗೆ ಈಗ 51 ವರ್ಷ. ಆದರೆ ಕಾಜೋಲ್ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಗೆ ಕಾಣಿಸಿಕೊಂಡಿದ್ದರೆಂದರೆ ಅವರು ಪ್ರೇಕ್ಷಕರ ಮುಂದೆ ವಿಶೇಷ ವಸ್ತ್ರ ವಿನ್ಯಾಸದೊಂದಿಗೆ ಮಿರಿ ಮಿರಿ ಮಿಂಚುತ್ತಿದ್ದರು. ಸಮಾರಂಭದ ಆಕರ್ಷಣೀಯ ಕೇಂದ್ರ ಬಿಂದುವಾದ ಅವರು ವಯಸ್ಸು ಕೇವಲ ಲೆಕ್ಕಕ್ಕೆ ಮಾತ್ರ. ಅದು ಸಂಖ್ಯೆ ಮಾತ್ರ ಎಂಬುದನ್ನು ಅವರು ಸಾಭೀತು ಪಡಿಸಿದರು. ಕಾಜೋಲ್ ಕಳೆದ ಮೂರು ದಶಕಗಳಿಂದ ಬಾಲಿವುಡ್ ನ ಖ್ಯಾತ ನಟಿಯಾಗಿ ಹೆಸರು ಮಾಡಿದವರು.





