ಬಾಲಿವುಡ್ ಸಿಂಗಂ ಖ್ಯಾತಿಯ ಅಜಯ್ ದೇವ್ಗನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 56ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜನಪ್ರಿಯ ತಾರೆಗೆ ಚಿತ್ರೋದ್ಯಮದ ಸ್ನೇಹಿತರು, ಆಪ್ತರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ವಿಶೇಷ ಸಂದರ್ಭ, ಅಜಯ್ ಅವರ ಪತ್ನಿ, ಸ್ಟಾರ್ ನಟಿ ಕಾಜೋಲ್ ಕೂಡಾ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಕಾಜೋಲ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಕಾಜೋಲ್ ಮತ್ತು ಅಜಯ್ ನಡುವಿನ ಕೆಮಿಸ್ಟ್ರಿ ಈ ಫೋಟೋದಲ್ಲಿ ಸ್ಪಷ್ಟವಾಗಿ ಕಂಡಿದೆ.
ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪತಿ, ಸ್ಟಾರ್ ನಟ ಅಜಯ್ ದೇವ್ಗನ್ ಜೊತೆಗಿನ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಇಬ್ಬರೂ ಮ್ಯಾಚಿಂಗ್ ಬ್ಲ್ಯಾಕ್ ಔಟ್ಫಿಟ್ನಲ್ಲಿ ಬಹಳ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿದ ಜನಪ್ರಿಯ ನಟಿ, ಆಲ್ ಕೂಲ್ ಪೀಪಲ್ ಆಗಸ್ಟ್‌ನಲ್ಲಿ ಜನಿಸಿದರು. ಆದ್ರೆ ನಿಮಗೆ ಬರ್ತ್ಡೇ ವಿಶಸ್ ತಿಳಿಸಲು ನಮಗೇನು ಅಭ್ಯಂತರವಿಲ್ಲ. ಯಾವಾಗಲೂ ನನಗಿಂತ ಹಿರಿಯರಾಗಿರುವುದಕ್ಕೆ ಧನ್ಯವಾದಗಳು (ಬಹುಶಃ ವಯಸ್ಸನ್ನು ಉಲ್ಲೇಖಿಸಿರಬಹುದು) ಎಂದು ಬರೆದುಕೊಂಡಿದ್ದಾರೆ.
1974ರ ಆಗಸ್ಟ್ 5ರಂದು ಜನಿಸಿರುವ ನಟಿಗೀಗ 50 ವರ್ಷ. ಹಾಗಾಗಿ, ಆಗಸ್ಟ್‌ನಲ್ಲಿ ಕೂಲ್ ಪೀಪಲ್ ಜನಿಸಿದರು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, ನನಗಿಂತ ಹಿರಿಯರು ಎಂದು ಛೇಡಿಸಿದ್ದಾರೆ. ಕಾಜೋಲ್ ಬಾಲಿವುಡ್‌ನ ಬ್ಯೂಟಿಫುಲ್, ಫನ್ನಿ ಗರ್ಲ್ ಎಂದೇ ಹೇಳಬಹುದು. ತಮ್ಮ ಪತಿಯೊಂದಿಗೆ ಅದೇ ರೀತಿಯಲ್ಲಿ ವರ್ತಿಸುತ್ತಾರೆ. ಅಜಯ್ ಅವರನ್ನು ಛೇಡಿಸುವುದರಲ್ಲಿ ಕಾಜೋಲ್ ಎಕ್ಸ್ಪರ್ಟ್ ಅಂತಲೇ ಹೇಳಬಹುದು. ಅದರಂತೆ ಇದೀಗ ಅವರು ಶೇರ್ ಮಾಡಿರುವ ಬರ್ತ್ಡೇ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಜೊತೆಗೆ, ಫ್ಯಾನ್ಸ್ ಕಾಮೆಂಟ್ ಸೆಕ್ಷನ್ನಲ್ಲಿ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ಕಾಜೋಲ್ ಮತ್ತು ಅಜಯ್ ದೇವ್ಗನ್ ಒಟ್ಟಿಗೆ ಅನೇಕ ಚಿತ್ರಗಳಲ್ಲಿ ತೆರೆಹಂಚಿಕೊಂಡಿದ್ದಾರೆ. ಸಖ್ ಮೇ ಹಸ್ಲ್, ಗುಂಡರಾಜ್, ಇಷ್ಕ್, ಪ್ಯಾರ್ ತೋ ಹೋನಾ ಹಿ ಥಾ, ದಿಲ್ ಕ್ಯಾ ಕರೇ ಮತ್ತು ರಾಜು ಚಾಚಾ ಈ ಜೋಡಿಯ ಚಿತ್ರಗಳು. ಹೀಗೆ ಸ್ನೇಹ ಪ್ರೀತಿಗೆ ತಿರುಗಿ, ನಂತರ ದಾಂಪತ್ಯ ಜೀವನ ಆರಂಭಿಸಿದರು. ಬಾಲಿವುಡ್‌ನ ಮಾದರಿ ದಂತಿಯಾಗಿ ಗುರುತಿಸಿಕೊಂಡಿದ್ದಾರೆ. 1999ರಲ್ಲಿ ಮದುವೆಯಾದ ಅಜಯ್ ಮತ್ತು ಕಾಜೋಲ್ಗೆ ನೈಸಾ ಮತ್ತು ಯುಗ್ ಎಂಬಿಬ್ಬರು ಮಕ್ಕಳಿದ್ದಾರೆ.
ಅಜಯ್ ದೇವ್ಗನ್ ಅವರ ಮುಂದಿನ ಸಿನಿಮಾ ಬಗ್ಗೆ ಗಮನಿಸೋದಾದ್ರೆ, ಕೊನೆಯ ಬಾರಿಗೆ ಸಿಂಗಮ್ ಎಗೇನ್ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ, ರೈಡ್ 2, ದೇದೆ ಪ್ಯಾರ್ 2 ಮತ್ತು ಸನ್ ಆಫ್ ಸರ್ದಾರ್ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.