ಐಗಳಿ: ಕಕಮರಿ ಗ್ರಾಮ ದೇವತೆ ಶ್ರೀ ಅಮ್ಮಾಜೇಶ್ವರಿ ದೇವಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಝಂಜರವಾಡ ನದಿ ಸ್ನಾನಕ್ಕೆ ಕಾಲ್ನಡಿಗೆ ಮೂಲಕ ರವಿವಾರ ತೆರಳಿದರು. ಅಥಣಿ ತಾಲೂಕಿನ ಕಕಮರಿ ಗ್ರಾಮದ ಶ್ರೀ ಅಮ್ಮಾಜೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ವಿವಿಧ ಕಲಾ ತಂಡದೊಂದಿಗೆ ಸಡಗರ ಸಂಭ್ರಮದಿಂದ ಐಗಳಿ ಗ್ರಾಮದಲ್ಲಿ ಸಂಜೆ ಜರುಗಿತು.
ಕಕಮರಿ ಯಿಂದ ಮುಂಜಾನೆ 11 ಗಂಟೆಗೆ ತೆರಳಿ ಕೇಸಕ್ಕದಡ್ಡಿ ಮಾರ್ಗವಾಗಿ ಐಗಳಿ ಗ್ರಾಮಕ್ಕೆ ಆಗಮಿಸಿ ಬಾಡಗಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು. ನದಿ ಸ್ಥಾನಕ್ಕೆ ಗ್ರಾಮದ ಪ್ರತಿಯೊಂದು ಮನೆಯ ಅವರು ಜಾತಿ ಧರ್ಮ ಮರೆತು ಭಾಗವಹಿಸಿ ಸಾವಿರಾರು ಜನರು ದೇವಿ ಜೊತೆಗೆ ಕಾಲ್ನಡಿಗೆ ಹೆಜ್ಜೆ ಹಾಕುತ್ತಾ ಸಾಗಿದರು.
ನೂರಾರು ಎತ್ತಿನ ಗಾಡಿಗಳು ಟ್ರಾಕ್ಟರ್ ಗಳು ಗ್ರಾಮದ ಜಾತ್ರೆಯಲ್ಲಿ ಸಾವಿರಕ್ಕಿಂತ ಹೆಚ್ಚು ವಾಹನಗಳು ಪಾಲ್ಗೊಳ್ಳುತ್ತಾವೆ. ಗ್ರಾಮದ ಮುಖಂಡರು ಅಧಿಕರಿಗಳು, ನೌಕರರು , ರೈತರು ಮಹಿಳೆಯರು ಯುವಕರು ಉತ್ಸಾಹದಿಂದ ಪಾಲ್ಗೊಂಡು ದೇವಿಯ ಜೊತೆಗೆ ಹೆಜ್ಜೆ ಹಾಕುತ್ತಾರೆ ದಾರಿ ಉದ್ದಕ್ಕೂ ಭಕ್ತರು ಅನ್ನ ಪ್ರಸಾದ್ ಉಪಹಾರ ಚಾಹಾ ಚೋಡಾ ವ್ಯವಸ್ಥೆ ಮಾಡಿರುತ್ತಾರೆ ಸೋಮಾವಾರ ಬಾಡಗಿ ಗ್ರಾಮದಿಂದ ಬೆಳಗ್ಗೆ ತೆರಳಿವುದು ಝಂಜರವಾಡ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಮುಂಜಾನೆ 10 ಗಂಟೆಗೆ ದೇವಿಯ ನದಿ ಸ್ಥಾನ ಜರುಗುವುದು ನಂತರ ಅನ್ನಪ್ರಸಾಧ ಸುಪ್ರಸಿದ್ಧ ಭಜನಾ ಪದಗಳು ಜರುಗಲಿವೆ .
ಮಂಗಳವಾರ ಮುಂಜಾನೆ 10 ಗಂಟೆಗೆ ಅಲ್ಲಿಂದ ಕಕಮರಿಗೆ ಕಡೆಗೆ ಪಲ್ಲಕ್ಕಿ ಉತ್ಸವ ಸಾಗುವುದು ಎಂದು ಶ್ರೀ ಅಮ್ಮಾಜೇಶ್ವರಿ ದೇವಿ ಟ್ರಸ್ಟ್ ಕಮಿಟಿ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ: ಆಕಾಶ ಮಾದರ




