ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ತಹಶಿಲ್ದಾರರ ಕಾರ್ಯಾಲಯದಲ್ಲಿ ಕಲಬುರಗಿ ಕರ್ನಾಟಕ ಲೋಕಾಯುಕ್ತ ಇಲಾಖೆಯ ಡಿವೈಎಸ್ಪಿ ಗಳಾದ ಗೀತಾ ಬೇನಾಳ, ಅಧ್ಯಕ್ಷತೆಯಲ್ಲಿ ಚಿಂಚೋಳಿ ತಾಲೂಕಿನ ಜನರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿ ಚಿಂಚೋಳಿ ತಾಲೂಕಿನ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕೆಲಸವನ್ನು ನಿಷ್ಠೆಯಿಂದ ಕೆಲಸ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು .
ಎಲ್ಲಾಧಿಕಾರಿಗಳು ಒಂದು ಸೂಚನೆ ಏನೆಂದರೆ ಕೆಲವರು ನಾವು ಲೋಕಾಯುಕ್ತ ಅಧಿಕಾರಿಗಳು ಎಂದು ಫೋನ್ ಮಾಡೋ ಮುಖಾಂತರ ನಿಮಗೆ ಬೆದರಿಸಿ ಹಣ ಕೇಳಿದರೆ ಯಾರು ನಂಬಬೇಡಿ ಏಕೆಂದರೆ ಇಂತ ಘಟನೆ ಬಹಳಷ್ಟು ನಡೆದಿದ್ದು ಎಲ್ಲಾ ಅಧಿಕಾರಿಗಳು ಹುಷಾರ ಇರಬೇಕೆಂದು ಎಂದು ಹೇಳಿದರು ಸಭೆಯಲ್ಲಿ ಕಲಬುರ್ಗಿ ಲೋಕಾಯುಕ್ತ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಅಕ್ಕಮಹಾದೇವಿ.ತಹಸಿಲ್ದಾರ್ ಸುಬ್ಬಣ್ಣ ಜಮಖಂಡಿ, ತಾಲೂಕ ಪಂಚಾಯತಿ ಇ ಒ ಶಂಕರ್ ರಾಠೋಡ್, ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ವರದಿ :-ಸುನೀಲ್ ಸಲಗರ