ಬೆಂಗಳೂರ: ತೊಟ್ಟಿಲು ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಧಾರವಾಡ ಜಿಲ್ಲೆ ಕಲಘಟಗಿಯಿಂದ ಸ್ಯಾಂಡಲ್ವುಡ್ ರೆಬಲ್ ಸ್ಟಾರ್ ಅಂಬರೀಶ್ ಮನೆಗೆ ಹೊಸ ತೊಟ್ಟಿಲು ಆಗಮಿಸಲಿದೆ.
ಕಲಘಟಗಿಯ ಚಿತ್ರಗಾರ ಶ್ರೀಧರ್ ಅವರು ಕುಟುಂಬವು ಅಂಬಿ ಮೊಮ್ಮಗನ ನಾಮಕರಣಕ್ಕೆ ವಿಶೇಷ ತೊಟ್ಟಿಲು ಸಿದ್ಧಪಡಿಸಿದ್ದಾರೆ. ಇದೇ ಮಾರ್ಚ್ ಎರಡನೇ ವಾರದಲ್ಲಿ ಅದ್ಧೂರಿ ನಾಮಕರಣ ಸಮಾರಂಭ ನಡೆಯಲಿದೆ.
ಕಲಘಟಗಿ ತೊಟ್ಟಿಲು ಎಂದರೆ ಭಾರೀ ಫೇಮಸ್ಸು. ಇಲ್ಲಿಂದ ಗಣ್ಯಾತಿಗಣ್ಯರ ಮನೆ ಮಕ್ಕಳ ನಾಮಕರಣ ಸಂದರ್ಭಗಳಲ್ಲಿ ತೊಟ್ಟಿಲು ಪೂರೈಸಲಾಗಿದೆ. ಇದೀಗ ನಟ ಅಭಿಷೇಕ್ ಅಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿ ಆಸೆಯಂತೆ ಕಲಘಟಗಿಯಿಂದ ವಿಶೇಷವಾದ ಚೆಂದದ ತೊಟ್ಟಲು ಸಿದ್ದವಾಗಿದ್ದು, ಬೆಂಗಳೂರಿಗೆ ಬರಲಿದೆ.
ಬೆಂಗಳೂರಿಗೆ ಸೇರಿಕೊಳ್ಳಲಿವೆ ಈ ಪಂಚಾಯಿತಿಗಳು, ಇಲ್ಲಿ ಭೂಮಿ ಇದ್ರೆ ನೀವೇ ಕೋಟ್ಯಾಧಿಪತಿಗಳು ಈ ಹಿಂದೆ ಕೆಜಿಎಫ್ ಖ್ಯಾತಿಯ ನಟ ಯಶ್ ಮತ್ತು ರಾಧಿಕಾ ದಂಪತಿ ಮಗನ ನಾಮಕರಣ ಸಂಧರ್ಭದಲ್ಲೂ ಇದೇ ಚಿತ್ರಗಾರ ಕುಟುಂಬದಿಂದ ಕಲಘಟಗಿಯಲ್ಲಿ ತಯಾರಾದ ತೊಟ್ಟಿಲು ಬಳಕೆ ಆಗಿತ್ತು. ಇದೀಗ ಜೂನಿಯರ್ ರೆಬಲ್ ಸ್ಟಾರ್ ಅಂಬರೀಷ್ ಗಾಗಿ ತಾಲೂಕಿನಲ್ಲಿ ತೊಟ್ಟಿಲು ತಯಾರಿಸಲಾಗಿದೆ.
ಮಾರ್ಚ್ 14 ರಂದು ಅದ್ಧೂರಿ ನಾಮಕರಣ ಇದೇ ತಿಂಗಳ ಮಾರ್ಚ್ 14 ರಂದು ಅಭಿಷೇಕ್ ಅಂಬರೀಶ್ ಪುತ್ರನ ನಾಮಕಾರಣ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಈ ನಾಮಕರಣದಲ್ಲಿ ತೊಟ್ಟಿಲು ಪ್ರಮುಖ ಸ್ಥಾನ ಪಡೆಯಲಿದೆ. ಸುಮಾರು ಎರಡು ತಿಂಗಳಿಂದ ಚಿತ್ರಗಾರ ಶ್ರೀಧರ್ ಅವರು ತೊಟ್ಟಿಲು ತಯಾರಿಸಿ ಅಂತಿಮ ರೂಪ ನೀಡಿದ್ದಾರೆ.
ದಶಕಗಳ ಹಿಂದೆ ಅಂಬರೀಶ್ ಆಸೆಯಂತೆ ಕಲಘಟಗಿಯಲ್ಲಿ ತೊಟ್ಟಿಲು ತಯಾರಿಸಲಾಗಿತ್ತು. ಇದೀಗ ಅಂಬರೀಶ್ ಮೊಮ್ಮಗನ ನಾಮಕರಣಕ್ಕೂ ಕಲಘಟಗಿಯಿಂದ ತೊಟ್ಟಿಲು ತಯಾರಿಸಿ ತರಿಸಲಾಗುತ್ತಿದೆ. ಸುಮಾರು 4 ತಲೆಮಾರುಗಳಿಂದ ತೊಟ್ಟಿಲು ತಯಾರಿಕೆಯಲ್ಲಿ ತೊಡಗಿರುವ ಚಿತ್ರಗಾರ ಕುಟುಂಬ ಅದೇ ಕಾಯಕವನ್ನು ಮುಂದುವರೆಸಿಕೊಂಡು ಬಂದಿದೆ.
ನಾವು ಈಗಲೂ ಅಮೆರಿಕ ಪರವಾಗಿದ್ದೇವೆ ಎಂದಉಕ್ರೇನ್ ಅಧ್ಯಕ್ಷ ಕಲಘಟಗಿ ತೊಟ್ಟಲು ವಿಶೇಷ ಏಕೆ? ತೊಟ್ಟಿಲಲ್ಲಿ ಕೃಷ್ಣನ ಅವತಾರ, ದಶಾವತಾರದ ಚಿತ್ರಕಲೆ ರಸಾಯನಿಕ (ಕೆಮಿಕಲ್) ರಹಿತ, ವಿಶೇಷ ಕಟ್ಟಿಗೆಯಿಂದ ತೊಟ್ಟಿಲು ಸಿದ್ಧ ಪ್ರಧಾನಿ ಮೋದಿ ಅವರಿಗೂ ಈ ತೊಟ್ಟಿಲು ಮಾದರಿ ಉಡುಗೊರೆಯಾಗಿದೆ. ಇದನ್ನು ಸ್ವತಃ ನಾಮಕರಣ ಮಾಡುವವರು ಬಳಸುತ್ತಾರೆ. ಇಲ್ಲವೇ ಇತರರಿಗೆ ಉಡುಗೊರೆಯಾಗಿ ನೀಡಲು ಕಲಘಟಗಿಯಿಂದ ಒಯ್ಯುತ್ತಾರೆ.
ಇದು ಡಾ.ರಾಜ್ ಮನಸೋತ ತೊಟ್ಟಿಲು ಈ ಹಿಂದೆ ವರನಟ ದಿವಂಗತ ಡಾ.ರಾಜ್ ಕುಮಾರ್, ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವಾರು ಗಣ್ಯರು ಈ ತೊಟ್ಟಿಲಿಗೆ ಮನಸೋತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಿಗೂ ಕೂಡ ಕಲಘಟಗಿ ತೊಟ್ಟಿಲು ರವಾನಿಯಾಗುತ್ತದೆ. ಇಷ್ಟೊಂದು ಪ್ರಖ್ಯಾತಿ ಪಡೆದ ಈ ತೊಟ್ಟಿಲುಗಳ ತಯಾರಿಕೆ, ವಿಶೇಷತೆ, ಪ್ರಸದ್ಧಿ ಮತ್ತು ಪೂರೈಕೆ ಕುರಿತು ಪಿಎಚ್ಡಿ ಮಹಾ ಪ್ರಬಂಧ ಸಹ ಮಾಡಲಾಗಿದೆ.




