Ad imageAd image

ಬಿಜೆಪಿ ತೆಕ್ಕೆಗೆ ಕಲಘಟಗಿ ಪಪಂ

Bharath Vaibhav
ಬಿಜೆಪಿ ತೆಕ್ಕೆಗೆ ಕಲಘಟಗಿ ಪಪಂ
WhatsApp Group Join Now
Telegram Group Join Now

ಕಲಘಟಗಿ: -ಕಳೆದ ಒಂದೂವರೆ ವರ್ಷದಿಂದ ಖಾಲಿ ಉಳಿದಿದ್ದ ಕಲಘಟಗಿ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆ ಆಗಿಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಬಿಜಿಪಿಯ ಶಿಲ್ಪಾ ವಿನಾಯಕ ಪಾಲ್ಕರ, ಉಪಾಧ್ಯಕ್ಷರಾಗಿ ಗಂಗಾಧರ ತಿಪ್ಪಣ್ಣಗೌಳಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್ ಪಕ್ಷದ ಶಕುಂತಲಾ ಬೋಳಾರ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ವೃಷಬೇಂದ್ರ ಪಟ್ಟಣಶೆಟ್ಟಿ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಪರ 11 ಮತ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪರ ಐದು ಮತಗಳು ಬಿದ್ದವು. ಅತೀ ಹೆಚ್ಚು ಮತ ಪಡೆದ ಬಿಜೆಪಿಯ ಶಿಲ್ಪಾ ಹಾಗೂ ಗಂಗಾಧರ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದರು. ತಹಶೀಲ್ದಾರ್ ವೀರೇಶ ಮುಳುಗುಂದಮಠ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯೋತ್ಸವ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆ ಆಗುತ್ತಿದಂತೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.

ಈ ವೇಳೆ ಮಾಜಿ ಎಂ.ಎಲ್.ಸಿ ನಾಗರಾಜ ಛಬ್ಬಿ, ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ, ಬಿಜೆಪಿ ಮುಖಂಡರಾದ ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಫಕ್ಕೀರೇಶ ನೇಸರೇಕರ, ಅಣ್ಣಪ್ಪ ಓಲೇಕಾರ, ಮಹಾಂತೇಶ ತಹಸೀಲ್ದಾರ, ಸದಾನಂದ ಚಿಂತಾಮಣಿ, ಮದನ ಪಾಟೀಲ, ಬಸವರಾಜ ಹೊನ್ನಳ್ಳಿ, ಸುರೇಶ ಶೀಲವಂತರ, ಬಸವರಾಜ ಮಾದರ, ಶ್ರೀಧರ ದ್ಯಾವಪ್ಪನವರ, ಪ್ರಮೋದ ಪಾಲ್ಕರ, ಪರಶುರಾಮ ಹುಲಿಹೊಂಡ, ಚಂದ್ರಗೌಡ ಪಾಟೀಲ, ಪುಂಡಲೀಕ ಜಾಧವ, ವಿನಾಯಕ ಗೌಳಿ, ಗಣೇಶ ವಾಲಿಕಾರ ಹಾಗೂ ಪಪಂ ಸರ್ವ ಸದಸ್ಯರಿದ್ದರು.

ವರದಿ : ಶಶಿಕುಮಾರ ಕಲಘಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!