ಚಿಟಗುಪ್ಪ : ಬೀದರ ಜಿಲ್ಲೆಯಲ್ಲಿ ಬರುವ ಚಿಟಗುಪ್ಪ ತಾಲ್ಲೂಕಿನ ಉಡಬಾಳ ಗ್ರಾಮ ಪಂಚಾಯತನಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಮಾಜಿ ಗ್ರಾಮ ಪಂಚಾಯತ ಸದಸ್ಯ ಲಕ್ಷ್ಮಣ ಕಲಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಚಿಟಗುಪ್ಪ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿ ಅವರು ಉಡಬಾಳ ಗ್ರಾಮ ಪಂಚಾಯತ ಕುರಿತು ಮಾತನಾಡಿದರು.
ಕಳೆದ 2017ರಿಂದ 2024ನೇ ಸಾಲಿನವರೆಗೆ 14 ಮತ್ತು 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಅಂದಿನ ಅಧ್ಯಕ್ಷ ಹಾಲಿ ಸದಸ್ಯ ನರಸಾರೆಡ್ಡಿ ಹಾಗೂ ಪಿಡಿಒ ಸಂಧ್ಯಾರಾಣಿ ಸೇರಿ ವ್ಯಾಪಕ ಅವ್ಯವಹಾರ ನಡೆಸಿದ್ದಾರೆ.
ಈ ಕುರಿತು ತನಿಖೆ ಮಾಡುವಂತೆ ಜಿಲ್ಲಾ ಪಂಚಾಯತಗೆ ದೂರು ಸಲ್ಲಿಸಲಾಗಿತ್ತು.ಅವರು ಶಿವರಾಜ ಎನ್ನುವ ಅಧಿಕಾರಿಗೆ ಪರಿಶೀಲನೆ ಮಾಡಲು ನೇಮಿಸಿದ್ದಾರೆ.ಆದರೆ ಅಧಿಕಾರಿ ಶಿವರಾಜ ಕೇವಲ ಒಂದು ದಿನ ಬಂದು 20 ಕಾಮಗಾರಿಗಳಲ್ಲಿ 13 ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಏನು ತಿಳಿಸದೇ ಹಾದು ಹೋಗಿದ್ದಾರೆ ಎಂದು ದುರಿದರು.
ಈಗಲಾದರೂ ಸಂಭಂದ ಪಟ್ಟ ಅಧಿಕಾರಿಗಳು ಉಡಬಾಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಮನೋಹರ ಸೊನೈ,ಪಾಂಡುರಂಗ ಭಂಗಿ,ಶ್ರೀನಿವಾಸ ರೆಡ್ಡಿ ಮಾತನಾಡಿ, ಒಟ್ಟಾರೆ ಗ್ರಾಮ ಪಂಚಾಯತನಲ್ಲಿ ಅವ್ಯವಹಾರ ನಡೆದಿದೆ.ಸಂಪೂರ್ಣ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಗನಾಥ ಮಾಲಿ ಪಾಟೀಲ್, ಶಂಕರ ರೇಕುಳಗಿ,ಸಂಜು ರೆಡ್ಡಿ, ವಿಜಯಕುಮಾರ್,ಜಗನಾಥ ಅರ್ಜುನ್,ರಾಜು, ಬಕ್ಕಾರೆಡ್ಡಿ ನಾಗನಕೇರಾ,ತುಕರಾಮ ತ್ಯಾಗಿ ಸೇರಿದಂತೆ ಇತರರಿದ್ದರು.
ವರದಿ : ಸಜೀಶ ಲಂಬುನೋರ




