Ad imageAd image

ತೆಂಗಳಿ ವಿಶ್ವಕರ್ಮ ಸಮಾಜ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಕಾಳಿಕಾದೇವಿ ಪೂಜಾ ಮಹೋತ್ಸವ 

Bharath Vaibhav
ತೆಂಗಳಿ ವಿಶ್ವಕರ್ಮ ಸಮಾಜ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಕಾಳಿಕಾದೇವಿ ಪೂಜಾ ಮಹೋತ್ಸವ 
WhatsApp Group Join Now
Telegram Group Join Now

ಬೆಂಗಳೂರು : ಕಾಳಿಕಾ ದೇವಿಯು ಹಿಂದೂ ಧರ್ಮದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ದಯಾಮಯಿ ತಾಯಿಯಾಗಿದ್ದು, ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ (ವಿಶೇಷವಾಗಿ ದುಷ್ಟಶಕ್ತಿಗಳು ಸಂವಾರ ದೇವಿ ಹಾಗೂ ಪಾರ್ವತಿಯ ರೌದ್ರಾವತಾರ. ಅಹಂಕಾರ, ಅಜ್ಞಾನವನ್ನು ನಾಶಮಾಡಿ ಭಕ್ತರಿಗೆ ಮುಕ್ತಿ (ಮೋಕ್ಷ) ನೀಡಿ, ರಕ್ಷಿಸುವ ಕಾಳಿದೇವಿ ಮಹಿಮೆಯು ಅಪಾರವಾದದ್ದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಪೂಜ್ಯ ಮಾಣಿಕಪ್ಪ ವಿಶ್ವಕರ್ಮ ಹೇಳಿದರು.

ಅವರು ಕಲಬುರ್ಗಿ ಜಿಲ್ಲಾ ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ಪ್ರತಿಷ್ಠಿತ ದೇವಸ್ಥಾನದಲ್ಲಿ ಒಂದಾದ ಶ್ರೀ ಕಾಳಿಕಾ ಕಮಟೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಮುಖಂಡರಾದ ಮೋನಪ್ಪ ಮೆಲಿನಮನಿ, ಭೀಮರಾಯ ಮೇಲಿನಮನಿ, ರವಿಕುಮಾರ್ ಕಮ್ಮಾರ್, ವಿರೇಂದ್ರ ಬಡಿಗೇರ್, ಮನೋಹರ್ ಬಡಿಗೇರ್, ಗಣಪತಿ ಪ್ರಭು ಬಡಿಗೇರ್ ಮತ್ತು ದೇವಸ್ಥಾನ ಸಮಿತಿ ಮುಖಂಡರು ಸೇರಿದಂತೆ ಯುವಕರ ನೇತೃತ್ವದಲ್ಲಿ ಯುಗಾದಿ ಹಬ್ಬದ ನಿಮಿತ್ತ ಕಾಳಿಕಾದೇವಿ ಪೂಜಾ ಮಹೋತ್ಸವ ಸಂಭ್ರಮವನ್ನು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಹಾ ಮಂಗಳಾರತಿ ಮಾಡುವ ಮೂಲಕ ಚಾಲನೆ ನೀಡಿ ಪ್ರದಾನ ಅರ್ಚಕ ಪೂಜ್ಯ ಮಾಣಿಕಪ್ಪ ವಿಶ್ವಕರ್ಮ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಕಾಳಿಕಾ ಕಮಟೇಶ್ವರ ಸಮಿತಿ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು, ಪುರೋಹಿತ ಶ್ರೀನಿವಾಸ್ ಆಚಾರ್ಯ, ಕಾಳಗಿ ತಾಲೂಕಿನ ವಿಶ್ವಕರ್ಮ ಸಮಾಜ ಅಧ್ಯಕ್ಷ ಮೋನಪ್ಪ ಮಂಗಲಗಿ, ಭೀಮರಾವ್ ಎಂ, ರವಿ ಕುಮಾರ್ ಕಮ್ಮಾರ್, ಮನೋಹರ್ ಬಿ, ಮೋನಪ್ಪ ಹೆಚ್, ಪ್ರಭಾಕರ್ ವೀರೇಂದ್ರ ಬಿ, ಶ್ರೀಧರ್ ಎಸ್, ಹನುಮಂತ್ ಎಂ, ಮನೋಹರ್ ಹಣಮಂತ ಪ್ಪ, ಅಯ್ಯಪ್ಪ ಎಂ, ಶ್ರೀನಿವಾಸ್ ಎಂ, ಕಾಶಿನಾಥ್ ಎಂ, ಮನೋಹರ್ ಎಂ,ಅಯ್ಯಣ್ಣ ಬಿ, ಗಂಗಾಧರ್ ಸಣ್ಣೂರು, ತೆಂಗಳಿ ವಿಶ್ವಕರ್ಮ ಸಮಾಜದ ಮಹಿಳಾ ಮುಖ್ಯಸ್ಥೆರಾದ ಪ್ರೇಮಾ ಮಾಣಿಕಪ್ಪ ಬಡಿಗೇರ್, ಈರಮ್ಮ ಆರ್ ಕಮ್ಮಾರ್, ಗೌರಮ್ಮ ವಿ ಬಡಿಗೇರ್, ಅಮರಾವತಿ ಸೇರಿದಂತೆ ವಿಶ್ವಕರ್ಮ ಬಂಧು ಭಗನಿಯರು ಮುಂತಾದವರು ಉಪಸ್ಥಿತರಿದ್ದರು.

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!