——————————————————-ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಸ್ವಪ್ನಿಲ್ ಅವಾಡೇ ಅಭಿಮತ
ಮಹಾರಾಷ್ಟ್ರ: ಈಚಲಕರಂಜಿಯ ಕಲ್ಲಪ್ಪಣ್ಣ ಅವಾಡೆ ಜನತಾ ಬ್ಯಾಂಕ್ ದಾಖಲೆ ಐದು ಸಾವಿರ ಕೋಟಿ ರೂಪಾಯಿಗಳ ವಾರ್ಷಿಕ ವ್ಯವಹಾರದತ್ತ ಹೆಜ್ಜೆ ಹಾಕುತ್ತಿದ್ದು 55 ಕೋಟಿ ರೂಪಾಯಿಗಳ ಲಾಭ ಪಡೆದುಕೊಂಡಿದೆ,ಕರ್ನಾಟಕ ಮಹಾರಾಷ್ಟ್ರ ಹಾಗು ಗೋವಾ ರಾಜ್ಯಗಳಲ್ಲಿ ಕಾರ್ಯಕ್ಷೇತ್ರ ಹೊಂದಿರುವ ಮಲ್ಟಿಸ್ಟೇಟ್ ಅತಿ ಶೀಘ್ರದಲ್ಲಿಯೇ ಗುಜರಾತ್ ನಲ್ಲೂ ಶಾಖೆ ಪ್ರಾರಂಭಸಲಿದೆ ಎಂದು ಅಧ್ಯಕ್ಷ ಸ್ವಪ್ನಿಲ್ ಅವಾಡೆ ತಿಳಿಸಿದರು ಅವರು ನಗರದ ಘೋರ್ಪಡೆ ನಾಟ್ಯಗೃಹ ದಲ್ಲಿ ನಡೆದ 63ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೆ ವೇಳೆ ಬ್ಯಾಂಕಿನ ಸಂಸ್ಥಾಪಕ ಕಲ್ಲಪ್ಪನ್ನಾ ಅವಾಡೆ ಹಾಗೂ ಮಾಜಿ ಶಾಸಕ ಪ್ರಕಾಶ ಅವಾಡೆಯವರ ಮಾರ್ಗದರ್ಶನದಲ್ಲಿ ಸಂಸ್ಥೆ ಶಿಖರಮಟ್ಟಕ್ಕೆ ತಲುಪಿರುವ ಕರ್ನಾಟಕ ಮಹಾರಾಷ್ಟ್ರದ ಮಲ್ಟಿಸ್ಟೀಜ್ ಬ್ಯಾಂಕ್ ಇದಾಗಿದ್ದು ತನ್ನ 54 ಶಾಖೆಗಳ ಮುಖಾಂತರ ತಮ್ಮ ಬ್ಯಾಂಕು ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಇಚಲಕರಂಜಿ ಪಟ್ಟಣದಲ್ಲಿಯ ಅತಿ ಸಣ್ಣ ವ್ಯಾಪಾರಸ್ಥರಿಗೆ ಹಾಗೂ 1500 ಕ್ಕೂ ಅಧಿಕ ಮಹಿಳಾ ಉಳಿತಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಸಕಾಲಕ್ಕೆ ಸಾಲ ಮರುಪಾವತಿಸಿ ಕೊಂಡಿದ್ದರಿಂದ ದಾಖಲೆ 55 ಕೋಟಿ ರೂಪಾಯಿಗಳ ಲಾಭ ಪಡೆಯಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ ಅವಾಡೆ ಮಾತನಾಡಿ*ನಗರದಲ್ಲಿ ಉದ್ಯೋಗ ವೃದ್ಧಿಗಾಗಿ ಹಾಗೂ ಕಾರ್ಮಿಕರನ್ನು ಮಾಲೀಕರನ್ನಾಗಿಸಲು ಸದರಿ ಬ್ಯಾಂಕ್ ಅಭಯಹಸ್ತ ನೀಡಿದೆ. ಕೇಂದ್ರಸರ್ಕಾರದೊಂದಿಗೆ ರಾಜ್ಯಸರ್ಕಾರದ ವಿವಿಧ ಯೋಜನೆಗಳನ್ನು ಸ್ವೀಕರಿಸಿ ಸರ್ವಸಾಮಾನ್ಯ ಜನತೆಗೆ ಮುಟ್ಟಿಸಲು ಬ್ಯಾಂಕ್ ಪ್ರಯತ್ನಿಸ ಬೇಕೆಂದರು* ಮುಖ್ಯ ಕಾರ್ಯಕಾರಿ ಅಧಿಕಾರಿ ಸಂಜಯ್ ಸಿರಗಾವಿ ಮಾತನಾಡಿ ಬ್ಯಾಂಕಿನ ನೋಟಿಸ್ ಅಂದಾಜು ಪತ್ರಿಕೆ ಹಾಗೂ ಸಾಂಪತ್ಯಕ ಸ್ಥಿತಿ ತಿಳಿಸಿದರು.
ಬ್ಯಾಂಕು 2862 ಕೋಟಿ ರೂಪಾಯ ಠೇವು 1846 ಕೋಟಿ ರೂಪಾಯಿ ಸಾಲ ವಿತರಿಸಿ ಸಕಾಲಕ್ಕೆಮರುಪಾವತಿಸಿಕೊಂಡಿದ್ದರಿಂದ ಅತ್ಯಧಿಕ ಲಾಭ ಪಡೆಯಲು ಸಾಧ್ಯವಾಯಿತು ಎಂದರು ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷ ಸಂಜಯ್ ಕುಮಾರ್ ಅನಿಗೋಳ್ ಆಡಳಿತ ಅಧ್ಯಕ್ಷ ಚಂದ್ರಕಾಂತ ಚೌಗುಲೆ ಅಶೋಕರಾವ ಸೌದತ್ತಿಕರ ಮಹೇಶ್ ಸಾತಪೂತೆ ಡಿಜಿ ಕೋರೆ ವೈಶಾಲಿ ಅವಾಡೇ ಅಣ್ಣಸಾಹೇಬ ನೇರ್ಲೆ, ಜಯಪ್ರಕಾಸ್ ಸಾಳಗಾವಕರ ದೀಪಕ ಪಾಟೀಲ ಸೇರಿದಂತೆ ಬ್ಯಾಂಕಿನ ಸದಸ್ಯರು, ಉಪಸ್ಥಿತರಿದ್ದರು
ದೀಪಕ್ ಪಾಟೀಲ್ ಕಿರಣ್ ಪಾಟೀಲ್ ಸೇರಿದಂತೆಸೇರಿದಂತೆ ಸರ್ವ ಸಂಖ್ಯಾಲಕರು ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




