Ad imageAd image

ಕಲ್ಯಾಣ ಕರ್ನಾಟಕ ಉತ್ಸವ ತಹಶೀಲ್ದಾರರಿಂದ ರಾಷ್ಟ್ರ ಧ್ವಜಾರೋಹಣ.

Bharath Vaibhav
ಕಲ್ಯಾಣ ಕರ್ನಾಟಕ ಉತ್ಸವ ತಹಶೀಲ್ದಾರರಿಂದ ರಾಷ್ಟ್ರ ಧ್ವಜಾರೋಹಣ.
WhatsApp Group Join Now
Telegram Group Join Now

ಸಿರುಗುಪ್ಪ :- ನಗರದ ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ತಾಲೂಕಾಡಳಿತದಿಂದ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ, ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿ 1947 ಅಗಸ್ಟ್ 15 ರಂದು ಬ್ರಿಟೀಷರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಭಾರತದ ಗಣರಾಜ್ಯದಲ್ಲಿ ಸೇರದೇ ಉಳಿದಿದ್ದ ಹೈದ್ರಾಬಾದ್ ಪ್ರಾಂತ್ಯಕ್ಕೆ ಮಾತ್ರ ನಿಜಾಮರ ಕಪಿ ಮುಷ್ಟಿಯಿಂದ ನಮಗೆ ಮುಕ್ತಿ ದೊರೆತಿರಲಿಲ್ಲ.

ಹೈದ್ರಾಬಾದ್ ಕರ್ನಾಟಕದಲ್ಲಿದ್ದ ಅಂದಿನ ಆರು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಬಳ್ಳಾರಿ ಜಿಲ್ಲೆಗಳಿಗೆ 13 ತಿಂಗಳು 2 ದಿನಗಳ ನಂತರ ಕಲ್ಯಾಣ ಕರ್ನಾಟಕಕ್ಕೆ ಉಕ್ಕಿನ ಮನುಷ್ಯನೆಂದೇ ಪ್ರಖ್ಯಾತಿಯಾಗಿದ್ದ ಸರ್ದಾರ್ ವಲಭಬಾಯ್ ಪಟೇಲರ ದಿಟ್ಟ ನಿರ್ಧಾರದಿಂದ ಸ್ವಾತಂತ್ರ್ಯ ದೊರಕಿದೆ.

ಸ್ವತಂತ್ರ ಭಾರತದ ನಂತರ ಹಲವು ಅರಸರ ಆಳ್ವಿಕೆಯ ಹಲವು ಸಂಸ್ಥಾನಗಳು ಭಾರತದ ಗಣತಂತ್ರದಲ್ಲಿ ವಿಲೀನವಾದರೆ ಕೆಲವು ಸಂಸ್ಥಾನಗಳು ಸ್ವತಂತ್ರವಾಗಿ ನಿರಂಕುಶ ಪ್ರಭುತ್ವ ಮುಂದುವರೆಸಿದ್ದು, ಅದರಲ್ಲಿ ಹೈದ್ರಬಾದ್ ನಿಜಾಮರ ಸಂಸ್ಥಾನವು ಒಂದಾಗಿತ್ತು.

ಕಾಲಾನಂತರ ನಿಜಾಮರ ದಬ್ಬಾಳಿಕೆ ವಿರುದ್ದ ರಮಾನಂದ ತೀರ್ಥರ ನೇತೃತ್ವದಲ್ಲಿ ಆರಂಭವಾದ ಹೋರಾಟದಲ್ಲಿ ಭಾರತದಲ್ಲಿ ವಿಲೀನತೆಯ ಕೂಗು ಈ ಪ್ರದೇಶದಲ್ಲಿ ಕೇಳಿಬರುತ್ತದೆ. ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ, ಮಹಿಳೆಯರ ಮೇಲಿನ ದೌರ್ಜನ್ಯ, ಹತ್ಯೆಗಳು ಜರುಗುತ್ತವೆ.

ಹೋರಾಟಗಾರರು ಪ್ರಾಣದ ಹಂಗು ತೊರೆದು ಇನ್ನಿತರರು ಹೋರಾಟಕ್ಕೆ ಮುಂದಾಗಿ ಭಾರತ ಸರ್ಕಾರದ ಸಹಾಯ ಕೇಳಿದಾಗ ನಿಜಾಮನಾಗಿದ್ದ ಮೀರ್ ಉಸ್ಮಾನ್ ಅಲಿಖಾನ್ ರಜಾಕ್ ಎನ್ನುವ ಖಾಸಗಿ ಸೈನ್ಯದ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಾನೆ.

ಸೆಪ್ಟಂಬರ್ 13, 1948 ಅಂದಿನ ಗೃಹಸಚಿವರಾಗಿದ್ದ ಪಟೇಲರು ಪೋಲೋ ಎನ್ನುವ ಕಾರ್ಯಾಚರಣೆ ನಡೆಸಿ ಹೈದ್ರಾಬಾದ್ ಪ್ರಾಂತ್ಯದಿಂದ ಸೆ.17. 1947ರಂದು ವಿಮೋಚನೆಗೊಳಿಸಿ ಸ್ವತಂತ್ರ ದೊರೆಕಿಸಿದ್ದು ಅಂದಿನಿದ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದ್ದು, ಇದೀಗ ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆಂದು ತಿಳಿಸಿದರು.

ಇದೇ ವೇಳೆ ನಗರಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ, ಉಪಾಧ್ಯಕ್ಷೆ ಕೆ.ಯಶೋದಾ ಮೂರ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಹಾಜರಿದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!