ಸೇಡಂ: ತಾಲೂಕಿನ ಮೆದಕ್ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ೭೫ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಸರದಾರ ವಲ್ಲಭಬಾಯಿ ಪಟೇಲ್, ಮಹಾತ್ಮ ಗಾಂಧಿಯವರ ಚಿತ್ರಪಟಗಳಿಗೆ ಮಾಲಾರ್ಪಣೆ ಮಾಡಿ ತದನಂತರ ಧ್ವಜಾರೋಹಣ ನೆರವೇರಿಸಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳಾದ ರಾಮಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವಮ್ಮ ಗಂಡ ಮಾಣಿಕಪ್ಪ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




