ವಿಜಯಪುರ : ನಿಡಗುಂದಿ ತಾಲೂಕಿನ ನಿಡಗುಂದಿ ಪಟ್ಟಣದ ಕಮದಾಳ್ ಪುನರ್ ವಸತಿ ಕೇಂದ್ರದಲ್ಲಿ ಶ್ರೀ ಮುದ್ದೇಶ್ವರ ಪ್ರಭುಗಳ ಜಾತ್ರ ರಥೋತ್ಸವ ಹಾಗೂ ದನಗಳ ಜಾತ್ರೆ ಅತಿ ವಿಜೃಂಭಣೆ ಜರುಗಿತು.
ಈ ಜಾತ್ರೆಯು ಶ್ರೀಯುತ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ನೆರವೇರಿತು.ಜಾತ್ರೆಯು ಸುಮಾರು 10 ದಿನಗಳಿಂದ ದನಗಳ ಜಾತ್ರೆ ನಡೆಯುತ್ತಿದ್ದು ಬಂದ ಭಕ್ತಾಧಿಕಗಳಿಗೆ ಪ್ರತಿದಿನ ಅನ್ನ ಸಂತರ್ಪಣೆ.
ಈ ಜಾತ್ರೆಯ ವಿಶೇಷತೆವೇನೆಂದರೆ ಕಾಳಗಿ, ಮಾಗಿ, ಅಂಜೂಟಿಗಿ, ಬೀಳಗಿ , ಮುಧೋಳ್ ಮಠಗಳಿಂದ ಬರುವ ಪ್ರಭುಗಳ ಬೆತ್ತ ಪಾದಗಳನ್ನು ಬರಮಾಡಿಕೊಳ್ಳುವುದು ವಿಶೇಷ.
ಶ್ರೀ ಮುದೇಶ್ವರ ದೇವರ ಮೂರ್ತಿ ಹಾಗೂ ಕುಂಭಮೇಳದೊಂದಿಗೆ ಗಂಗಾ ಪೂಜೆ ಸಲ್ಲಿಸಿ ನಂತರ ಶ್ರೀ ಮುದ್ರೇಶ್ವರ ರಥೋತ್ಸವ ಜರುಗಿತು.
ಜಾತ್ರೆಯಲ್ಲಿ ಜಂಗಿ ಕುಸ್ತಿ ಪಂದ್ಯಾವಳಿ ಹಾಗೂ ಸಾಮಾಜಿಕ ನಾಟಕವನ್ನು ಆಯೋಜಿಸಿದ್ದರು. ಮತ್ತೊಂದು ವಿಶೇಷ ಈ ದೇವರ ಮೂರ್ತಿ ಎರಡು ಬದಿ ಮುಖವಿರುವುದು ವಿಶೇಷ, ಈ ದೇವರ ಒಂದು ಪವಾಡವೇನೆಂದರೆ ಯಾರಿಗಾದರೂ ಹಾವು ಕಚ್ಚಿದರೆ ಆ ಸಮಯದಲ್ಲಿ ಶ್ರೀ ಮುದೇಶ್ವರ ಪ್ರಭು ದೇವರ ಹೆಸರು ಹೇಳಿಕೊಂಡು ಮಂತ್ರಾಕ್ಷತೆಯನ್ನು ಕಟ್ಟಿಕೊಂಡರೆ ಯಾವುದೇ ಪ್ರಾಣಾಪಾಯ ಬರುವುದಿಲ್ಲ ಎಂದು ಜನರ ನಂಬಿಕೆ.
ಈ ಎಲ್ಲ ಜಾತ್ರೆಯ ಉಸ್ತುವಾರಿಯನ್ನು ಶ್ರೀ ಮದ್ವೆಶ್ವರ ಟ್ರಸ್ಟ್ ಕಮಿಟಿ ಕಮದಾಳ ಪುನರ್ವಸತಿ ಕೇಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತ ದೈವ ಮಂಡಳಿ ಜಾತ್ರೆಯ ಉತ್ಸವವನ್ನು ನಿರ್ವಹಿಸಿದ್ದರು.
ವರದಿ:ಅಲಿ ಮಕಾನದಾರ