ಸಿಂಧನೂರು : ಕರ್ನಾಟಕ ರಾಜ್ಯದ ಕನ್ನಡಿಗರ ಭಾವನೆಗಳಿಗೆ ದಕ್ಕೆ ತರವಂತೆ ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟಿತು ಎಂದು ಅವಹೇಳನಕಾರಿ ಹೇಳಿಕೆಯನ್ನು ಖ್ಯಾತ ನಟ ಕಮಲ್ ಹಾಸನ್ ಹೇಳಿದ್ದು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ದ,ವತಿಯಿಂದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟಿಸಿ ತಹಸಿಲ್ದಾರ್ ರವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಕರವೇ ತಾಲೂಕ ಅಧ್ಯಕ್ಷ ಲಕ್ಷ್ಮಣ ಭೋವಿ ತಿಳಿಸಿದರು.
ನಂತರ ಕರವೇ ಮುಖಂಡರು ಮಾತನಾಡಿ ತಮಿಳು ಭಾಷೆಯ ಮೇರು ನಟ ಮತ್ತು ರಾಜಕಾರಣಿಯಾದ ಕಮಲ್ ಹಾಸನ್ ಅವರ ಧಗ್ ಲೈಫ್ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿತು ಎಂದು ಹೇಳಿಕೆಯನ್ನು ನೀಡಿದ್ದು ಖಂಡನೀಯವಾಗಿದೆ.
ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ವೇದಿಕೆ ಕಮಲ್ ಹಾಸನ್ ಅವರ ಈ ಧೋರಣೆಯನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಸದರಿ ತಗ್ ಲೈಫು ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿ ಆದೇಶ ಹೊರಡಿಸಬೇಕು ಎಂದು ವಿನಂತಿಸಿಕೊಳ್ಳುತ್ತಾ ಒಂದು ವೇಳೆ ಅವರ ಕ್ಷಮೆಯಾಚನೆ ಇಲ್ಲದೆ ಕರ್ನಾಟಕದಲ್ಲಿ ಅವರ ಹೊಸ ಚಿತ್ರ ಬಿಡುಗಡೆಗೊಳಿಸಿದರೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ, ತಾಲೂಕ ಅಧ್ಯಕ್ಷ ಲಕ್ಷ್ಮಣ ಭೋವಿ. ಕರವೇ ಮುಖಂಡರಾದ ಗುರುರಾಜ ಮುಕ್ಕುಂದ. ಮರಿಯಪ್ಪ ಬಂಡಿ.
ಶಿವಮ್ಮ ಮಹಿಳಾ ಘಟಕದ ಅಧ್ಯಕ್ಷರು. ಗೌರವಾಧ್ಯಕ್ಷರಾದ ಕಾಳಪ್ಪ ಮೇಸ್ತ್ರಿ ಖಜೂರ್ ಭಾಷಾ. ಉಪಾಧ್ಯಕ್ಷರಾದ ರಾಜಸಾಬ್ ಬಸವರಾಜ್ ವಿಶ್ವಕರ್ಮಶಂಕರ್ ಬ್ಯಾಡಗಿ. ಮೆಹಬೂಬ್ ಗೊಮರ್ಸಿ. ಇನ್ನು ಅನೇಕರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




