ಹೌದು ವೀಕ್ಷಕರೇ ಇದು ಎಲ್ಲಿ ಅಂತೀರಾ ಬನ್ನಿ ತೋರುಸ್ತೀವಿ
ರಾಮದುರ್ಗ: ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕಿನ ಪುರಸಭೆಗೆ ಒಟ್ಟು ಸಂಬಂಧಪಟ್ಟ 27 ವಾರ್ಡಗಳು ಇದ್ದು ಅದರಲ್ಲಿ ಬಿಜೆಪಿ ಸದಸ್ಯರು 16 ಕಾಂಗ್ರೆಸ್ ಸದಸ್ಯರು 10 ಪಕ್ಷೇತರ 1 ಒಟ್ಟು 27 ಸದಸ್ಯರಲ್ಲಿ ತಮ್ಮ ಬಿಜೆಪಿ ಮೆಜಾರಿಟಿಯಲ್ಲಿ ಎರಡುವರೆ ವರ್ಷ ಬಿಜೆಪಿ ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭೆ ನಡೆಸಿಕೊಂಡು ಬಂದಿರುತ್ತಾರೆ
ಆನಂತರ ಕೆಲವು ಸಮಸ್ಯೆಗಳಿಂದ ಕೆಲವು ದಿನಗಳ ಕಾಲ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಡೆ ಹಿಡಿಯಲಾಗಿತ್ತು
ಇಂದು ಸದಇಲ್ಲದೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಲಾಯಿತು ಬಿಜೆಪಿಯ ಸದಸ್ಯರಾದ ವಾರ್ಡ್ ನಂಬರ್ 6 ರ ಶ್ರೀಮತಿ ಲಕ್ಷ್ಮಿ ಜಗದೀಶ ಕಡಕೋಳ ಈಟೀ ಓಣಿ ರಾಮದುರ್ಗ ಇವರನ್ನು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ನಂತರ ವಾರ್ಡ್ ನಂಬರ್ 9 ಕಾಸಿಪೆಟ ರಾಮದುರ್ಗ ಶ್ರೀಮತಿ ಸರಿತಾ ಗೋವಿಂದಪ್ಪ ದೂತ ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು
ಆನಂತರ ಪುರಸಭೆಗೆ ಆಗಮಿಸಿದ ಮಾಜಿ ಶಾಸಕರಾದ ಮಾದೇವಪ್ಪ ಯಾದವಾಡ ಅವರು ಪುರಸಭೆಯ ಅವಿರೋಧ ಆಯ್ಕೆ ಆದ ಮಹಿಳಾ ಅಧ್ಯಕ್ಷ ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮುಖಾಂತರ ಗೌರವಹಿಸಿದ್ದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಾದೇವಪ್ಪ ಯಾದವಾಡ, ಧನಲಕ್ಷ್ಮಿ ಸಕ್ಕರೆ ಫ್ಯಾಕ್ಟರಿ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ, ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶುಭಾಷ ಪಾಟೀಲ, ಹಾಗೂ ರಾಜೇಶ್ ಬಿಳಗಿ, ಹಾಗೂ ಬಿಜೆಪಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ವರದಿ : ಮಂಜುನಾಥ ಕಲಾದಗಿ