ಸಾವಳಗಿ: ಗ್ರಾಮದಲ್ಲಿ ಕಂಬಿ ಮಲ್ಲಯ್ಯ ಐದೇಶಿ ಕಾರ್ಯಕ್ರಮವು ಗ್ರಾಮದಲ್ಲಿ ಎರಡು ದಿನ ಹಬ್ಬದ ವಾತಾವರಣದಂತೆ ಕಂಡು ಬಂದಿತ್ತು ಸೋಮವಾರದಂದು ಗ್ರಾಮದ ಎಲ್ಲ ದೇವರಿಗೆ ನೈವೇದ್ಯ ಅರ್ಪಿಸಿದರು. ರಾತ್ರಿ ರಸಮಂಜರಿ ಕಾರ್ಯಕ್ರಮ ಜರುಗಿತ್ತು ಈ ಕಾರ್ಯಕ್ರಮದಲ್ಲಿ ಟಿವಿ ವಾಹಿನಿಯ ಗಾಯಕರಾದ ಮಹಾನ್ಯ ಪಾಟೀಲ್ ಮತ್ತು ಕಾಸಿಮ ಅಲಿ ಇನ್ನು ಅನೇಕ ಕಲಾವಿದರು ಪಾಲ್ಗೊಂಡು ಜನರನ್ನು ರಂಜಿಸಿದ್ದರು
ಮಂಗಳವಾರ ನಸುಕಿನ ಜಾವದಲ್ಲಿ ನೂರಾರು ಜನ ಮಹಿಳೆಯರು ಆರತಿ, ನೂರಾರು ಜನ ಪುರುಷರು ದಿವಟಗಿ ತಂದು ಕಂಬಿ ಮಲ್ಲಯ್ಯ ದೇವರ ಮುಂದೆ ದೀಪ ಹಚ್ಚಿದರು.
ನಂತರ ಶ್ರೀಶೈಲಕ್ಕೆ ಹೋಗಿ ಬಂದ ಕುಟುಂಬದ ಹೆಸರಿನಲ್ಲಿ ಜಂಗಮರು ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬ ಸಮೇತ ಮಲ್ಲಯ್ಯನ ದೇವಸ್ಥಾನ ಕಡೆ ಹೋಗಿ ಅನ್ನ ಪ್ರಸಾದ ಸೇವಿಸಿದ್ದರು
ಕಂಬಿ ಮಲ್ಲಯ್ಯ ದೇವರನ್ನು ಆರತಿ, ದಿವಟಗಿ ವಿವಿಧ ವಾದ್ಯ ಮೇಳದೊಂದಿಗೆ ಪ್ರತೀ ವರ್ಷ ಪದ್ಧತಿಯಂತೆ ಕಂಬಿ ಮಲ್ಲಯ್ಯ ಕೂಡುವ ಸ್ಥಳಕ್ಕೆ ಕೂಡಿಸಿ ಮಂಗಳಾರತಿ ಮಾಡಿ ಕಂಬಿ ಐದೇಶಿ ಕಾರ್ಯಕ್ರಮವು ಮಂಗಳಗೊಂಡಿತು.
ಕಾರ್ಯಕ್ರಮದಲ್ಲಿ ಗ್ರಾಮದ ಜಂಗಮರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ರಾಜುಗೌಡ ಪಾಟೀಲ್ ಬಸವರಾಜ ಪರಮಗೊಂಡ ಸುಜಿತಗೌಡ ಪಾಟೀಲ ಬಸು ಗೌಡ ಹೊನವಾಡ ಅಪ್ಪುಗೌಡ ಪಾಟೀಲ್ ಗ್ರಾಮದ ಗುರು ಹಿರಿಯರು ಎಲ್ಲ ಮಲ್ಲಯ್ಯನ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ಅಜಯ್ ಕಾಂಬಳೆ