ಸೇಡಂ: ತಾಲೂಕಿನ ಶಿಲಾರಕೋಟ್ ಗ್ರಾಮದಲ್ಲಿ ಕನಕದಾಸರ ಜಯಂತಿಯನ್ನು ಕನಕ ದಾಸರ ಚಿತ್ರಪಟವನ್ನು ಊರಿನ ವಿವಿಧ ಬೀದಿಗಳಲ್ಲಿ ಡೊಳ್ಳು ಕುಣಿತ ಮುಖಾಂತರ ಮೆರವಣಿಗೆ ಮಾಡಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಭೀಮರೆಡ್ಡಿ ಅವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷ ಕೂಡ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ ದಿನದಿಂದದಿನಕ್ಕೆ ಸಮಾಜದಲ್ಲಿ ಸಂತ, ಕವಿಗಳ ಜಾಗೃತಿ ಮೂಡಿಬರುತ್ತಿದ್ದು ಇನ್ನಷ್ಟು ಜಾಗೃತಿಗಾಗಿ ಕನಕದಾಸರ ಮೂರ್ತಿ ಸ್ಥಾಪನೆ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಅದಷ್ಟು ಪ್ರಯತ್ನ ಮಾಡಿ ಈ ವರ್ಷದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದು ಹಾಲುಮತ ಸಮಾಜದ ಮುಖಂಡರಿಗೆ ಭರವಸೆ ನೀಡಿದರು.
ಊರಿನ ಮುಖಂಡರಾದ ಮಹಿಪಾಲ್ ರೆಡ್ಡಿ ಅವರು ಮಾತನಾಡಿ ಸಮಾಜದ ಹಿತಕ್ಕಾಗಿ ದಾಸರ ಪದಗಳನ್ನು ನಾವು ಅಳವಡಿಸಿಕೊಳ್ಳಬೇಕು ಮತ್ತು ಅವರ ತತ್ವಗಳನ್ನು ಈಗಿನ ಯುವಜನತೆಗೆ ತಿಳಿಸಿ ಮುಂದಿನ ದಿನಗಳಲ್ಲಿ ಕನಕ ದಾಸರ ಜಯಂತಿಯನ್ನು ಇನ್ನಷ್ಟು ಅದ್ದೂರಿಯಾಗಿ ಆಚರಣೆ ಮಾಡಬೇಕು ಅದಕ್ಕೆ ನಮ್ಮ ಸಹಕಾರ ಕೂಡ ಇರುತ್ತದೆ ಎಂದು ಹೇಳಿದರು.
ಈ ವೇಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಜನವಾಡ ಶಾಲೆಯ ಮುಖ್ಯ ಗುರುಗಳಾದ ಈರಪ್ಪ ಪೂಜಾರಿಯವರು ಅವರು ಮಾತನಾಡಿ ಕನಕ ದಾಸರ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ತುಂಬ ಹೆಮ್ಮೆಯಿದೆ ಆದರೆ ಇದರ ಜೊತೆಗೆ ಈಗಿನ ಯುವಜನತೆ ಕಲಿಕೆ ಕಡೆ ಕೂಡ ಹೆಚ್ಚು ಗಮನ ಕೊಡಬೇಕಿದೆ.
ಅದಕ್ಕಾಗಿ ಗ್ರಾಮ ಪಂಚಾಯತ್ ಆಡಳಿತವು ಊರಿನ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ರಾಮ ಪಂಚಾಯತ್ ವತಿಯಿಂದ ಕೇಂದ್ರ ಗ್ರಂಥಾಲಯವನ್ನು ಮಾಡಿಕೊಡಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಭೀಮರೆಡ್ಡಿ ದೇವಾಡಿ, ಮಹಿಪಾಲ ರೆಡ್ಡಿ, ಬಸಪ್ಪ ಸಾಹುಕಾರ್, ಈರಪ್ಪ ಪೂಜಾರಿ ಮುಖ್ಯ ಗುರುಗಳು, ರಾಜು ಪೂಜಾರಿ, ಬಾಲಪ್ಪ ಪೂಜಾರಿ, ಸಾಯಿಲು ಪೂಜಾರಿ, ಮದರಪ್ಪ ಪೂಜಾರಿ, ಮಹೇಶ್ ಪೂಜಾರಿ, ರೈತ ಸಂಘ ಕಾರ್ಯದಕ್ಷರಾದ ಸಾಬಪ್ಪ ಅಬ್ಬಗಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




