ಕಾಗವಾಡ: ಕಾಗವಾಡ ತಾಲೂಕಿನಲ್ಲಿ ಕಾಗವಾಡ ಪಟ್ಟಣದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಅತಿ ವಿಜ್ರಮಣೆಯಿಂದ ಆಚರಿಸಲಾಯಿತು.
ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಕನಕದಾಸರ ಪೂಜೆಯನ್ನು ನೆರವೇರಿಸಿದರು.
ಕಿತ್ತೂರು ಕರ್ನಾಟಕ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಸಂಘಟನೆಯವರು ಹಾಲುಮತ ಸಮಾಜದ ಬಾಂಧವರು, ಊರಿನ ಮುಖಂಡರು ಪೊಲೀಸರು ಬಾಗಿಯಾಗಿದ್ದರು.
ಪಟ್ಟಣದ ಚೆನ್ನಮ್ಮ ವೃತ್ತ ದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಾಲೂಕಾ ಆಡಳಿತ ಹಾಗೂ ಎಲ್ಲ ಸಂಘಟನೆಯವರು ಸೇರಿಕೊಂಡು ಸಂತ ಕನಕದಾಸ ಅವರ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ ರವೀಂದ್ರ ಹಾದಿಮನಿ, ಅಣ್ಣಸಾಬ್ ಕೋರೆ, ಸುರೇಖಾ ಬಸನಾಯ್ಕ್ ಪಿಎಸ್ಐ ರಾಗವೇಂದ್ರ ಖೋತ, ಬಿ ಇ ಓ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಗಾವಡೆ ಹಾಗೂ , ಜ್ಯೋತಿ ಪಾಟೀಲ್, ಕಾಕಾ ಪಾಟೀಲ್, ಕಿತ್ತೂರು ಕರ್ನಾಟಕ ಸೇನೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಕುರುಬರ ಯುವ ಮೋರ್ಚಾ ಅಧ್ಯಕ್ಷರು ಸಾವಕಾರ, ಕುರುಬರ ತಾಲೂಕ ಅಧ್ಯಕ್ಷ ಪ್ರಕಾಶ್ ಡಂಗ, ಉಪಾಧ್ಯಕ್ಷ ರಾವ್ ಸಾಬ್ ಜುಗಳೆ, ನಾಥಗೌಡ ಪಾಟೀಲ್, ಚೌಗುಲೆ, ಮುಲ್ಲಾ, ಪ್ರಕಾಶ್ ಪಾಟೀಲ, ಸಿದ್ದು ಭಾನುಸೆ, ಸದಾಶಿವ್ ಪೂಜಾರಿ, ಸಿದ್ದು ಒಡೆಯರ್, ಗಣೇಶ್ ಕೊಳೆಕರ ಬೀರಪ್ಪ ಪೂಜಾರಿ ಸಚಿನ್ ಕುರುಂಡವಾಡೆ, ರಾಜು ಬಾಗಿ ಇತರರು ಹಾಜರಿದ್ದರು.
ವರದಿ: ಚಂದ್ರಕಾಂತ್ ಕಾಂಬಳೆ




