ಹುಮನಾಬಾದ :-ತಾಲೂಕಿನ ಕನಕಟ್ಟಾ ಗ್ರಾಮದಲ್ಲಿ ಕುರುಬ ಹಾಗೂ ಗೊಂಡ ಸಮಾಜದ ವತಿಯಿಂದ ಭಾನುವಾರ ಬೀರಲಿಂಗೇಶ್ವರ ಜಾತ್ರಾ ನಿಮಿತ್ತ ಪಲ್ಲಕ್ಕಿ ಉತ್ಸವ ಮೇರವಣಿಗೆ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಬಳಿಕ ಪಲ್ಲಿಕ್ಕಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು.ಗ್ರಾಮದ ಪ್ರಮುಖ ರಸ್ತೆಯಲ್ಲಿ ಜರುಗಿದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ,ಡಿಜೆ ಹಾಡುಗಳಿಗೆ ಯುವಕರ ಕುಣಿತ ನೋಡುಗರರ ಗಮನ ಸೇಳೆಯಿತು.
ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಬೀರದೇವರಿಗೆ ಕಾಯಿ, ಕರ್ಪೂರ ಅರ್ಪಿಸಿ ದರ್ಶನ ಪಡೆದರು.ಈ ಸಂದರ್ಭದಲ್ಲಿ ಕುರುಬ ಹಾಗೂ ಗೊಂಡ ಸಮಾಜದವರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವರದಿ:- ಸಜೀಶ ಲಂಬುನೋರ್