ಕಣಕುಂಬಿ: ಮಲಪ್ರಭಾ ನದಿಯ ಉಗಮ ಸ್ಥಳ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮ, ಈ ಕಣಕುಂಬಿ ಗ್ರಾಮ ಹಾಗೂ ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಗ್ರಾಮಗಳನ್ನು ಪ್ರತಿನಿಧಿಸುವ ಈ ಕಣಕುಂಬಿ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯ ಬಂದೊದಗಿದೆ. ನೆರೆಯ ಗೋವಾ ರಾಜ್ಯದ ಗಡಿ ಪ್ರದೇಶದ ಕೊನೆ ಗಡಿ ಗ್ರಾಮ ಪಂಚಾಯಿತಿಯಾಗಿರುವ ಈ ಕಣಕುಂಬಿಗೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬರುತ್ತಿದ್ದು. ದಟ್ಟ ಅರಣ್ಯ ಪ್ರದೇಶದಿಂದ ಕೂಡಿದ್ದು ಮಲಪ್ರಭಾ ನದಿಯ ಉಗಮ ಸ್ಥಳವಾಗಿದೆ. ಇನ್ನೊಂದು ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮಗಳು ಅರಣ್ಯ ಪ್ರದೇಶದಲ್ಲಿ ಇದ್ದು, ದಿನನಿತ್ಯ ಕಾಡು ಪ್ರಾಣಿಗಳ ಉಪಟಳ ತುಂಬಾ ಜಾಸ್ತಿ ಇರುತ್ತದೆ. ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯು ಜಾಸ್ತಿಇದೆ. ಇನ್ನೊಂದು ಗರ್ಭಿಣಿ ಹೆಣ್ಣುಮಕ್ಕಳಿಗಂತೂ ಬಾರಿ ಅಪಾಯಕಾರಿ ಪ್ರದೇಶದಲ್ಲಿ ಇರುವ ಈ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯ ಬಂದೊದಗಿರುವುದು ತುಂಬಾನೇ ದುರ್ದೈವದ ಸಂಗತಿಯಾಗಿದೆ.
ಸಂಜೆ 4 ಆಯ್ತು ಅಂದ್ರೆ ಆಸ್ಪತ್ರೆ ಬಂದ್: ಸಾಕಷ್ಟು ಜನಸಂಖ್ಯೆ ಇರುವ ಈ ಪ್ರದೇಶದಲ್ಲಿರುವ ಈ ಸರ್ಕಾರಿ ಆಸ್ಪತ್ರೆ ಸಂಜೆ 4 ಆಯ್ತು ಅಂದ್ರೆ ಬಂದ್ ಆಗುತ್ತದೆಯಂತೆ. ಭಾನುವಾರ ಈ ಸರ್ಕಾರಿ ಆಸ್ಪತ್ರೆಗೆ ರಜಾ ದಿನವಂತೆ
ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಒಂದು ರೂಲ್ಸ್ ಭಟ್ ಕಣಕುಂಬಿ ಸರ್ಕಾರಿ ಆಸ್ಪತ್ರೆಗೆ ಭಾನುವಾರ ರಜಾ ದಿನವಂತೆ
■ ತುರ್ತಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಸಿಗೋದಿಲ್ಲ
ಈ ಸರ್ಕಾರಿ ಆಸ್ಪತ್ರೆಗೆ ತುರ್ತಾಗಿ ಸರ್ಕಾರಿ ಆಂಬುಲೆನ್ಸ್ ಇಲ್ಲದೆ ಇರುವ ಕಾರಣ ಈ ಭಾಗದ ಅನೇಕರು ತುಂಬಾ ತೊಂದರೆ ಅನುಭವಿಸಿದ್ದಾರೆ
■ ಈ ಆಸ್ಪತ್ರೆಯನ್ನು 24×7 ಮಾಡುವುದಕ್ಕೆ ಕೂಗು ಹೆಚ್ಚಳ: 20 ಕ್ಕೂ ಹೆಚ್ಚು ಗ್ರಾಮಗಳು ಈ ಕಣಕುಂಬಿ ಸರ್ಕಾರಿ ಆಸ್ಪತ್ರೆಯ ವ್ಯಾಪ್ತಿಗೆ ಬರುತ್ತಿದ್ದು ರಾತ್ರಿ ವೇಳೆ ಓಪನ್ ಇರುವುದಿಲ್ಲ, ಆದ ಕಾರಣ ದಟ್ಟ ಕಾಡಿನ ನಡುವೆ ದೂರದ ಖಾನಾಪುರ, ಬೆಳಗಾವಿ ಅಥವಾ ಗೋವಾಕ್ಕೆ ಹೋಗುವ ಪರಿಸ್ಥಿತಿ ಈ ಭಾಗದ ಜನತೆಗೆ ಇರುವುದರಿಂದ ಈ ಸರ್ಕಾರಿ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಒದಗಿಸಿ, ಸೂಕ್ತ ವೈದ್ಯರು, ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಇದಕ್ಕೆ 24×7 ಆಸ್ಪತ್ರೆ ಮಾಡಬೇಕು ಎಂಬ ಕೂಗು ಹೆಚ್ಚಳವಾಗಿದೆ.
ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಆದ ಡಾ. ಈಶ್ವರಪ್ಪ ಗಡಾದ್ ಹಾಗೂ ಖಾನಾಪುರ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಆದ ಡಾ. ಮಹೇಶ್ ಕಿವುಡಸನವರ್ ಅವರ ಗಮನಕ್ಕೆ ತೆಗೆದುಕೊಂಡು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಕಣಕುಂಬಿ ಸರ್ಕಾರಿ ಆಸ್ಪತ್ರೆಗೆ ಬಿಗ್ ಟ್ರೀಟ್ಮೆಂಟ್ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




