ಜಮೈಕಾ: ಪ್ರವಾಸಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ನಲ್ಲೂ ಲಘುಬಗೆಯ ವಿಕೆಟ್ ಗಳ ಪತನ ಮುಂದುವರೆದಿದೆ.
ಇಲ್ಲಿನ ಸಬೀನಾ ಪಾರ್ಕ್ ಕಿಂಗ್ಸ್ ಟನ್ ಓವೆಲ್ ಮೈದಾನದಲ್ಲಿ ನಡೆದಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಗಿದಾಗ ಟೆಸ್ಟ್ ಪಂದ್ಯದ ಮೂರನೇ ಇನ್ನಿಂಗ್ಸ್ ನ 6 ವಿಕೆಟ್ ಗಳು ಕೂಡ ಉರುಳಿವೆ. ಎರಡನೇ ದಿನದಾಟ ಮುಗಿದಾಗ ಆಸ್ಟ್ರೇಲಿಯಾ ತನ್ನ ದ್ವಿತೀಯ ಸರದಿಯಲ್ಲಿ 6 ವಿಕೆಟ್ ಗೆ 99 ರನ್ ಗಳಿಸಿತ್ತು. ಹೀಗಾಗಿ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದಲ್ಲಿ ಒಟ್ಟಾರೆ 181 ರನ್ ಗಳ ಮುನ್ನಡೆಯನ್ನಷ್ಟೇ ಗಳಿಸಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 143
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 225
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ 6 ವಿಕೆಟ್ ಗೆ 99