Ad imageAd image

ಅಬಕಾರಿ ಇಲಾಖೆ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಾಂಜಾ ಡ್ರಗ್ಸ್ ಮಾದಕ ವಸ್ತುಗಳನ್ನು ದಿ. 14.10.2024 ರಂದು ನಾಶಪಡಿಸಲಾಗಿದೆ.

Bharath Vaibhav
ಅಬಕಾರಿ ಇಲಾಖೆ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಾಂಜಾ ಡ್ರಗ್ಸ್ ಮಾದಕ ವಸ್ತುಗಳನ್ನು ದಿ. 14.10.2024 ರಂದು ನಾಶಪಡಿಸಲಾಗಿದೆ.
WhatsApp Group Join Now
Telegram Group Join Now

ಬೆಳಗಾವಿ : ಶ್ರೀ ಎಫ್.ಹೆಚ್. ಚಲವಾದಿ, ಅಸಿಸಿಬಕಾರಿ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ) ಬೆಳಗಾವಿ ವಿಭಾಗ, ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ, ಡ್ರಗ್ ಡಿಸ್ಪೋಸಲ್ ಕಮಿಟಿ ಸದಸ್ಯರಾದ ಕು. ವನಜಾಕ್ಷಿ ಎಂ.. ಅಬಕಾರಿ ಉಪ ಆಯುಕ್ತರು, ಬೆಳಗಾವಿ ದಕ್ಷಿಣ ಜಿಲ್ಲೆ ಬೆಳಗಾವಿ, ಶ್ರೀಮತಿ. ಸ್ವಪ್ನ ಆರ್.ಎಸ್.. ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ, ಶ್ರೀ ರಮೇಶಕುಮಾರ ಹೆಚ್.. ಅಬಕಾರಿ ಉಪ ಆಯುಕ್ತರು, ಧಾರವಾಡ, ಶ್ರೀ ಹನುಮಂತಪ್ಪ ಭಜಂತ್ರಿ, ಅಬಕಾರಿ ಉಪ ಆಯುಕ್ತರು, ಬಾಗಲಕೋಟೆ (ಪ್ರಭಾರ) ಮತ್ತು ಶ್ರೀ ಮುರಳಿಧರ ಹೆಚ್.ಓ.. ಅಬಕಾರಿ ಉಪ ಆಯುಕ್ತರು, ವಿಜಯಪುರ ರವರನ್ನೊಳಗೊಂಡ ಹಾಗೂ ಎಲ್ಲ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರ ಕಚೇರಿಯ ಎನ್ ಡಿ ಪಿ ಎಸ್ (ಸ್ಟ್ರಾಂಗ್ ರೂಮ್‌ನ) ಮಾಲಖಾನಾ ಉಸ್ತುವಾರಿಗಳಾದ ಅಬಕಾರಿ ಅಧೀಕ್ಷಕರುಗಳು ಕೂಡಿಕೊಂಡು ಹಾಗೂ ವಿಭಾಗ ವ್ಯಾಪ್ತಿಯ ಸಂಬಂಧಪಟ್ಟ ಅಬಕಾರಿ ಉಪ ಅಧೀಕ್ಷಕರು, ವಲಯಗಳ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ಸಮಕ್ಷಮದಲ್ಲಿ ಫರ್ನೇಸ್ (ಕುಲುಮೆಯಲ್ಲಿ) ಒಟ್ಟು 65 ಪ್ರಕರಣಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಜಪ್ತಾದ ಹಾಗೂ ಪೋಲಿಸ್ ಇಲಾಖೆಯಿಂದ ಹಸ್ತಾಂತರಗೊಂಡ ಬೆಳಗಾವಿ ದಕ್ಷಿಣ ಜಿಲ್ಲೆಯ 18 ಪ್ರಕರಣಗಳು, ಧಾರವಾಡ ಜಿಲ್ಲೆಯ 10 ಪ್ರಕರಣಗಳು, ವಿಜಯಪುರ ಜಿಲ್ಲೆಯ 34 ಪ್ರಕರಣಗಳು, ಬಾಗಲಕೋಟೆ ಜಿಲ್ಲೆಯ 3 ಪ್ರಕರಣಗಳು ಹೀಗೆ ಒಟ್ಟು 65 ಪ್ರಕರಣಗಳಲ್ಲಿ 1213.146 ಕೆ.ಜಿ. ಗಾಂಜಾ, 101 ಗಾಂಜಾ ಗಿಡಗಳು, 37.100 Poppy seeds, 13 ಪಾಪಿ ಸ್ಟ್ರಾ ಸಾಜೆಟ್‌ ಗಳು, 50.414 ៩. ម. 9.602 Tobacco, 11.56 kg Heroine, 3.439 Kg Hashish ನಾಶಪಡಿಸುವ ಸಲುವಾಗಿ ದಿನಾಂಕ: 14-10-2025 ರಂದು ಎಸ್‌ವಿಪಿ ಕೆಮಿಕಲ್ಸ್ ಪ್ರೈ.ಲಿ. ಜಾಂಬೋಟಿ ರಸ್ತೆ, ನಾವಗೆ ಗ್ರಾಮ, ಬೆಳಗಾವಿ ತಾಲೂಕ ಇಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ನಿಯಮಾನುಸಾರ ನಾಶಪಡಿಸಲಾಗಿರುತ್ತದೆ.

ಸದರಿ ನಾಶಪಡಿಸುವ ಪ್ರಕ್ರಿಯೆಯನ್ನು ಸ್ಥಳ ಪಂಚನಾಮೆ ಜರುಗಿಸಿ ವಿಡಿಯೋಗ್ರಾಫಿ ಹಾಗೂ ಪೋಟೋ ಚಿತ್ರಿಕರಣ ಮಾಡಿದ್ದು, ಸದರಿ ಮಾಹಿತಿಯನ್ನು ತಮ್ಮ ಘನತೆವೆತ್ತ ಮಾಧ್ಯಮಗಳಲ್ಲಿ
ಪ್ರಕಟಿಸಲಾಗಿದೆ. ಅಬಕಾರಿ ಜಂಟಿ ಆಯುಕ್ತರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!