ಸೇಡಂ: ತಾಲೂಕಿನ ಇಟಕಾಲ ಗ್ರಾಮದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕ ಸೇಡಂ ವತಿಯಿಂದ ದಿನಾಂಕ11.07.2025 ರಂದು ಶುಕ್ರವಾರ ತಾಲೂಕಿನ ಇಟಕಾಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ಸಸಿ (ಹೂವಿನ ಗಿಡ) ನೆಡುವ ಕಾರ್ಯಕ್ರಮದ ಜೊತೆಗೆ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವಿವರ ನಿರೂಪಕರು ಜಾಕಿರ್ ಹುಸೇನ್ ಸಹ ಶಿಕ್ಷಕರು ಹಾಗೂ ಪ್ರಾರ್ಥನೆ ಗೀತೆ ಕುಮಾರಿ ಭವಾನಿ ಹಾಗೂ ಸಂಗಡಿಗರು 10ನೇ ತರಗತಿ ರವರು ಮಾಡಿದರು.
ತಾಯಿ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪೂಜೆ ಮಾಡಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟಕರು ಗ್ರಾಮ ಪಂಚಾಯತ್ ಅಧ್ಯಕ್ಷರು ನರಸಿಂಗಮ ಗಂಡ ಲಾಲಪ್ಪ ಪೋಟೆಲಿ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದಾ ಸ್ವಾಮಿ.ಬಿ.ಹಿರೇಮಠ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸಾಯಪ್ಪ ಬೋಯಿನ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ವೇಂಕಟ ರೆಡ್ಡಿ ರುದ್ರವರ, ಗ್ರಾಮದ ಹಿರಿಯ ನಾಗರಿಕರು ಶಿಕ್ಷಣ ಪ್ರೇಮಿಗಳಾದ ಗುಂಡಪ್ಪ ಅವಂಟಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಬಸವ ರೆಡ್ಡಿ, ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಮೊಹಮ್ಮದ್ ಸಾಧಿಕ್ ಮಿಯಾ ವಹಿಸಿದರು, ಮತ್ತು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯಧಿಕಾರಿಗಳು ಡಾ.ಯುವರಾಜ್, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕ ಅಧ್ಯಕ್ಷರಾದ ಅಶೋಕ್ ಮಡಿವಾಳ ಬನ್ನಪ್ಪ ಪಾಸರ ಸಹ ಶಿಕ್ಷಕರು, ಹಾಗೂ ಸಮಾಜ ಸೇವಕರಾದ ಮಹಾಂತೇಶ್ ಸೌಕಾರ್ ಶಕಲಾಸಪಲ್ಲಿ, ಗ್ರಾಮದ ಮುಖಂಡರು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಶೇಖರ್ ನಾಯ್ಕೋಡಿ ಪಾಕಾಲ ದೇವೇಂದ್ರಪ್ಪ ತೋಲಮಾಮಡಿ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ವಂದನಾರ್ಪಣೆ ಮೋಹನ್ ಸಹ ಶಿಕ್ಷಕರು ಮಾಡಿದರು. ಶಿಕ್ಷಕರಾದ ಬಸಿರ್ ಅಹಮದ್, ಸಹ ಶಿಕ್ಷಕರು ರಾಮ ರೆಡ್ಡಿ ದೈಹಿಕ ಶಿಕ್ಷಕರು, ಗೋಪಾಲ್ ಅಥಿತಿ ಶಿಕ್ಷಕರು, ಹಾಗೂ ಸಾಲಿಯಾ ಬೇಗಂ ಸೇವಕಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




