Ad imageAd image

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಕನ್ನಡ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮ

Bharath Vaibhav
ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಕನ್ನಡ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮ
WhatsApp Group Join Now
Telegram Group Join Now

—————————————————-ಕಾನಗಡ್ಡ ಮತ್ತು ಬುರಗಪಲ್ಲಿ ಸರಕಾರಿ ಪ್ರೌಡ ಶಾಲೆಗಳಲ್ಲಿ

ಸೇಡಂ:  ತಾಲೂಕಿನ ಗಡಿಭಾಗ ಗ್ರಾಮಗಳಾದ ಕಾನಗಡ್ಡ ಮತ್ತು ಬುರಗಪಲ್ಲಿ ಗ್ರಾಮಗಳಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ ಅವರ ನೇತೃತ್ವದಲ್ಲಿ ಕನ್ನಡ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಗಡಿ ಭಾಗದ ಗ್ರಾಮಗಳ ಸಾರ್ವಜನಿಕರಿಗೆ ನಮ್ಮ ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಾವು ಮಾಡಬೇಕಾಗಿದೆ.

ಪಕ್ಕಾ ರಾಜ್ಯಗಳಾದ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಗಳಲ್ಲಿ ಅವರು ತಮ್ಮ ಮಾತೃ ಭಾಷೆಗೆ ಒತ್ತುಕೊಡುತ್ತರೆ ನಮ್ಮ ರಾಜ್ಯದ ಗಡಿಭಾಗದ ಜನರಿಗೆ ನಮ್ಮ ಮಾತೃ ಭಾಷೆ ಮಾತನಾಡಲು ಬರುವುದಿಲ್ಲ ಎಂದರೆ ನಾವೆಂತ ದುರ್ದೈವಿಗಳಾಗಿದ್ದಿವಿ ಎಂಬುದು ತೋರಿಸಿ ಕೊಡುತ್ತೆ.

ನಾವು ಹುಟ್ಟಿರುವುದು ಕರ್ನಾಟಕದಲ್ಲಿ, ವಿದ್ಯಾಬ್ಯಾಸ ಮಾಡುತ್ತಿರುವುದು ಕರ್ನಾಟಕದಲ್ಲಿ, ಆದರೆ ನಮಗೆ ಕನ್ನಡ ಮಾತನಾಡಲು ಬರುವುದಿಲ್ಲ ಇದಕ್ಕೆ ಕಾರಣ ನೆರೆರಾಜ್ಯದ ಭಾಷೆಯು ನಿಮಗೆ ವ್ಯಸನವಾಗಿದೆ. ಮೊದಲು ಅದನ್ನು ತಾವು ಮರೆಯಲು ಪ್ರಯತ್ನಿಸಿ ಇಂದಿನಿಂದ ನಿಮ್ಮ ತಂದೆತಾಯಿಗಳಿಗೆ ಕನ್ನಡ ಮಾತನಾಡಲು ತಿಳಿಸಿ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಬುರಗಪಲ್ಲಿ ಶಾಲೆಯ ಕಾರ್ಯಕ್ರದಲ್ಲಿ ಭಾರತ ವೈಭವ ವರದಿಗಾರರಾದ ವೆಂಕಟಪ್ಪ ಕೆ ಸುಗ್ಗಾಲ್ ಇವರಿಗೆ ವಿಶೇಷವಾಗಿ ಸನ್ಮಾನಿಸಿ ಪರಿಚಯಿಸಿದರು.

ಈ ಸಂದರ್ಭದಲ್ಲಿ ಕನಾಗಡ್ಡ ಸರ್ಕಾರಿ ಪ್ರೌಢ ಶಾಲೆ ಪ್ರಭಾರಿ ಮುಖ್ಯ ಗುರುಗಳು ಆದ ನಂದ ಕಿಶೋರ್,ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೆಂಕಟರೆಡ್ಡಿ, ವರದಾ ಸ್ವಾಮಿ ಬಿ ಹಿರೇಮಠ ಜಿಲ್ಲಾ ಉಪಾಧ್ಯಕ್ಷರು ಕಲಬುರ್ಗಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಶ್ರೀನಿವಾಸ ರೆಡ್ಡಿ, ಶಾಲೆಯ ಸಹ ಶಿಕ್ಷಕರುಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳು ರವೀಂದ್ರ, ಅಶೋಕ್ ಮಡಿವಾಳ ಕೊತ್ತಪ್ಪಲ್ಲಿ ತಾಲೂಕ ಅಧ್ಯಕ್ಷರು ಜಯ ಕರ್ನಾಟಕ ಜನಪರ ವೇದಿಕೆ ಸೇಡಂ, ಭೀಮರೆಡ್ಡಿ ಕನಾಗಡ್ಡ ಮುಧೋಳ್ ವಲಯ ಅಧ್ಯಕ್ಷರು, ಗ್ರಾಮದ ಮುಖಂಡರು ಬುಗ್ಗ ರೆಡ್ಡಿ ಮೈಮೂದ ಗ್ರಾಮ ಪಂಚಾಯತ್ ಸದಸ್ಯರು ಕನಾಗಡ್ಡ, ಅನಿಲ್ ಕುಮಾರ್ ತಾಲೂಕ ಅಧ್ಯಕ್ಷರು ರೈತ ಸಂಘ ಸೇಡಂ, ವೆಂಕಟರೆಡ್ಡಿ, ರವಿಕುಮಾರ್, ದೇವೇಂದ್ರಪ್ಪ, ಶೇಖರ್ ನಾಯ್ಕೋಡಿ, ಅಧ್ಯಕ್ಷರು ಇನ್ನಿತರರು ಇದ್ದರು.

ಬುರಗಪಲ್ಲಿ ಶಾಲೆಯ ಮುಖ್ಯ ಗುರುಗಳಾದ ಮೈಬೂಬ್ ಚಂಡರಕಿ, ವೆಂಕಟಪ್ಪ ಕೆ ಸುಗ್ಗಾಲ್ ಭಾರತ್ ವೈಭವ ಮಾಧ್ಯಮ ವರದಿಗಾರರು ಸೇಡಂ, ಶಾಲೆಯ ಸಹ ಶಿಕ್ಷಕರಾದ ಬಸವರಾಜ್, ನಿತ್ಯಾನಂದ, ಮಲ್ಲಯ್ಯ, ರಮೇಶ್ ಗೋoಗ್ಲೆ, ಲಾಲಪ್ಪ, ಶ್ರೀಮತಿ ಅಕ್ಕಮಹಾದೇವಿ ಶ್ರೀಮತಿ ಉಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!