ಸೇಡಂ:ತಾಲೂಕಿನ ರಂಜೋಳ ಗ್ರಾಮದ ಸರಕಾರಿ ಪ್ರೌಡ ಶಾಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ವತಿಯಿಂದ ಕನ್ನಡ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಮತ್ತು ಜ್ಯೋತಿ ಬೆಳಗಿಸಿರುವ ಮೂಲಕ ಪರಮ ಪೂಜ್ಯ ಶ್ರೀ ಶಿವಶಂಕರೇಶ್ವರ ಸ್ವಾಮಿ ಶ್ರೀ ಶಿವಶಂಕರ ಮಠ ಸೇಡಂ ಸ್ವಾಮಿಜಿ ರವರು ಚಾಲನೆ ನೀಡಿದರು.
ಈ ವೇಳೆ ಸೇಡಂ ಪೋಲಿಸ್ ಠಾಣೆಯಲ್ಲಿ ಸಿ.ಪಿ.ಐ.ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಪಂಚಾಕ್ಷರಿ ಸಾಲಿಮಠ ಅವರು ದಿನಾಂಕ 5/12/2025 ರಂದು ರಸ್ತೆ ಅಪಘಾತದಲ್ಲಿ ನಿಧಾನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಿ ದೇವರಲ್ಲಿ ಪ್ರಾರ್ಥಿಸಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿರುವ ಪರಮ ಪೂಜ್ಯ ಶ್ರೀ ಶಿವಶಂಕರ್ ಸ್ವಾಮೀಜಿ ಶ್ರೀ ಶಿವಶಂಕರ ಮಠ ಸೇಡಂರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಸರಕಾರಿ ಪ್ರೌಡ ಶಾಲೆ ಮುಖ್ಯ ಗುರುಗಳಾದ ಶ್ರೀಮತಿ ಜಗದೇವಿ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದಸ್ವಾಮಿ ಬಿ ಹಿರೇಮಠ, ರಂಜೋಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣರೆಡ್ಡಿ ಚಿಟಕನಪಲ್ಲಿ, ಮೋಹನ್ ರೆಡ್ಡಿ ಪಾಟೀಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ, ಎಸ್,ಎಸ್,ವಿ ಟಿವಿ ವರದಿಗಾರರಾದ ಶರಣಪ್ಪ ಎಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್, ಶಂಕರ್ ಲಿಂಗಪ್ಪ ಗೌಡ ಬಿ ಆರ್ ಸೇಡಂ, ಎಸ್ಡಿಎಂಸಿ ಅಧ್ಯಕ್ಷರಾದ ವೇಂಕಟ ರೆಡ್ಡಿ, ನಾರಾಯಣ ರೆಡ್ಡಿ ಶೇರಿಕರ್, ಭಗವಂತ ಉಪ್ಪಾರ್, ಚಂದ್ರ ಶೇಖರ ಮಡಿವಾಳ, ಚಿಗುರು ಶಾಲೆಯ ಮುಖ್ಯ ಗುರುಗಳಾದ ಚಂದ್ರಶೇಖರ್, ನರೇಶ್ ಗುಂಡೆಪಲ್ಲಿ ಮತ್ತು ಶಾಲೆಯ ಮಕ್ಕಳು ಶಿಕ್ಷಕರುಗಳು ಹಾಗೂ ರಂಜೋಳ ಗ್ರಾಮಸ್ಥರು ಮತ್ತು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




