ಬೆಂಗಳೂರು : ಕನ್ನಡದ ಹೆಮ್ಮೆಯ ಚಿತ್ರ ಕಾಂತಾರ ಚಾಪ್ಟರ್ 1 ಆಸ್ಕರ್ ರೇಸ್’ ನಲ್ಲಿ ಸ್ಥಾನ ಪಡೆದಿದೆ. ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್ 1 ಆಸ್ಕರ್ ಪಟ್ಟಿಗೆ ಸೇರ್ಪಡೆಯಾಗಿದೆ.201 ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರ ಚಾಪ್ಟರ್ 1 ಕೂಡ ಸ್ಪರ್ಧೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಇದು ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ಸಿನಿಮಾ ಅಲ್ಲ ಬದಲಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ಸಿನಿಮಾ ಆಸ್ಕರ್ ರೇಸ್ ಗೆ ಪ್ರವೇಶ ಪಡೆದಿದೆ.
ಕಾಂತಾರ ಚಾಪ್ಟರ್ 1′ (Kantara: Chapter 1) ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕನ್ನಡದ ಪೌರಾಣಿಕ ಸಾಹಸ ಚಿತ್ರವಾಗಿದ್ದು, ಇದು 2022ರ ‘ಕಾಂತಾರ’ ಚಿತ್ರದ ಮುಂದುವರಿದ ಭಾಗವಾಗಿದೆ, ಕದಂಬ ರಾಜವಂಶದ ಕಾಲದಲ್ಲಿ ದೈವದ ಮೂಲ ಮತ್ತು ಅರಣ್ಯದ ಸಂಘರ್ಷದ ಕಥೆಯನ್ನು ಹೇಳುತ್ತದೆ ಮತ್ತು ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ.




