ಬೆಳಗಾವಿ:– ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ರಾಯಬಾಗ ಬೆಳಗಾವಿ, ಇವರ ನೇತೃತ್ವದಲ್ಲಿ ರಂಗಾಯಣ ಸಭಾಭವನ ಧಾರವಾಡದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಮಾಡಲಾಯಿತು.ನವೆಂಬರ್ 15 ರಂದು ನಡೆದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ
ಡಾ. ಸಚಿನ ವಸಂತ ಮಾಹುಲಿ ನೇತ್ರದರ್ಶನ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಯೂನಿಟ್ ಆಫ್ ಡಾ. ಅಗರವಾಲ್ಸ್ ಕಣ್ಣಿನ ಆಸ್ಪತ್ರೆ ತಿಳಕವಾಡಿ ಬೆಳಗಾವಿ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಪ. ಪೂ. ಶ್ರೀ ರಮೇಶ ಮಹಾಸ್ವಾಮಿಗಳು, ಶ್ರೀ ಸಿದ್ದಣ್ಣ ಬಾಡಗಿ, ಹಾಗೂ ಅಧ್ಯಕ್ಷರು ಶ್ರೀ ಸಿದ್ರಾಮ ಎಂ ನಿಲಜಗಿ ಅವರು ಉಪಸ್ಥಿತರಿದ್ದರು. ಡಾ. ಸಚಿನ ವಸಂತ ಮಾಹುಲಿ ಅವರು ಸಾಕಷ್ಟು ಕಣ್ಣಿನ ಅಕ್ಷಿಪಟಲದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿರುತ್ತಾರೆ.
ಇವರು ಬೆಳಗಾವಿಯ ಸುಪ್ರಸಿದ್ಧ ಕಣ್ಣಿನ ಅಕ್ಷಿಪಟಲ ತಜ್ಞರು.ಬಡ ರೋಗಾರ್ತಿಗಳಿಗೆ ಉಚಿತ ಕಣ್ಣು ತಪಾಸಣೆ, ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆ, ಪ್ರತಿ ಹಳ್ಳಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಔದ್ಯೋಗಿಕ ವಲಯಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರಗಳನ್ನು ಮಾಡಿರುತ್ತಾರೆ. ಇದಲ್ಲದೆ ಸಾಮಾಜಿಕ ಕಾರ್ಯಗಳಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸೇವೆಯನ್ನು ಮಾಡಿರುತ್ತಾರೆ ಅನ್ನದಾನ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಹಿತ್ಯ ವಿತರಣೆ ಹೀಗೆ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ. ನೊಂದವರ ಪಾಲಿಗೆ ಆಶಾಕಿರಣ ವಾಗಿರುವ ಇವರ ಈ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಸ್ಥೆಯರು ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರ ಈ ಸಾಮಾಜಿಕ ಸೇವೆ ಹೀಗೆ ಮುಂದುವರಿಯಲಿ
ವರದಿ :-ಮಹಾಂತೇಶ ಎಸ್ ಹುಲಿಕಟ್ಟಿ