Ad imageAd image

ಬದುಕು ಕಟ್ಟಿಕೊಡುವ ಭಾಷೆ ಕನ್ನಡ: ವಿ. ನಾಗರಾಜ್ ಅಂದ್ರಹಳ್ಳಿ 

Bharath Vaibhav
ಬದುಕು ಕಟ್ಟಿಕೊಡುವ ಭಾಷೆ ಕನ್ನಡ: ವಿ. ನಾಗರಾಜ್ ಅಂದ್ರಹಳ್ಳಿ 
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಕರ್ನಾಟಕ ಏಕೀಕರಣಕ್ಕೆ ಅನೇಕ ಮಹನೀಯರು ಶ್ರಮಿಸಿದ್ದಾರೆ ಎಂದು ದೊಡ್ಡಬಿದರಿಕಲ್ಲು ವಾರ್ಡಿನ ಗ್ರೇಟರ್ ಬೆಂಗಳೂರು ಕಾಂಗ್ರೆಸ್ ಪ್ರಭಲ ಆಕಾಂಕ್ಷಿ ಅಭ್ಯರ್ಥಿ ವಿ ನಾಗರಾಜ್ ಅಂದ್ರಹಳ್ಳಿ ಹೇಳಿದರು.

 

ಅವರು ರಾಜಗೋಪಾಲನಗರ ವಾರ್ಡಿನ ವ್ಯಾಪ್ತಿಗೆ ಬರುವ ಜಿಕೆ ಡಬ್ಲ್ಯೂ ಲೇಔಟಿನ ಸ್ನೇಹ ಭಾರತಿ ಕನ್ನಡ ಯುವಕರ ಸಂಘದ ಅಧ್ಯಕ್ಷ ಅಮರ್ ನಾರಾಯಣ ಮತ್ತು ಚಂದ್ರಶೇಖರ್ (ಚಂದ್ರು) ಇವರ ನೇತೃತ್ವದಲ್ಲಿ ಜಿಕೆಡಬ್ಲ್ಯೂ ಲೇಔಟ್ ಅಣ್ಣಮ್ಮ ಸರ್ಕಲ್ದಲ್ಲಿ ಏರ್ಪಡಿಸಿದ್ದ 70ನೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡ ಭಾಷೆಗಾಗಿ ನಾವೆಲ್ಲರೂ ಪಣತೊಡಬೇಕಾಗಿದೆ ಲೇಖಕರು, ಕವಿಗಳು ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು ಎಂದು ವಿ.ನಾಗರಾಜ್ ತಿಳಿಸಿದರು.

ಕನ್ನಡಿಗರ ಭಾಷೆ ಚೆಂದ, ಕನ್ನಡಿಗರ ಮನವು ಅಂದ, ಕನ್ನಡಿಗರ ನಾಡು ಚೆಂದವೋ ಚಂದ ಕರ್ನಾಟಕ ನಮ್ಮ ಹೆಮ್ಮೆಯ ರಾಜ್ಯ ಕನ್ನಡ ನಮ್ಮ ಮಾತ್ರ ಭಾಷೆ ಕನ್ನಡಾಂಬೆ ಮಕ್ಕಳಾದ ನಾವು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಬೆ ಗೌರವಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸ್ನೇಹ ಭಾರತಿ ಕನ್ನಡ ಯುವಕರ ಸಂಘದ ಅಧ್ಯಕ್ಷ ಅಮರ್ ನಾರಾಯಣ ಅವರು ಸರ್ವರಿಗೂ ಸ್ವಾಗತಿಸಿದರು.

ಬಿಜೆಪಿ ಮುಖಂಡ ಹಾಗೂ ಕೈಗಾರಿಕಾ ಉದ್ಯಮಿ ದಿನೇಶ್, ಮಲ್ಲೇಶ್ ಬಿ ಕೆ ಇವರುಗಳು ಅನ್ನದಾನ ನಿಯೋಗಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಲ್ಲೇಶ್ ಬಿ ಕೆ, ಬಿಜೆಪಿ ಮುಖಂಡ ಹಾಗೂ ಕೈಗಾರಿಕಾ ಉದ್ಯಮಿ ದಿನೇಶ್, ಬಿಜೆಪಿ ಮಾಜಿ ಅಧ್ಯಕ್ಷ ಹರೀಶ್, ಜೆಡಿಎಸ್ ಯುವ ಮುಖಂಡ ಮೋಹನ್,ಗೋವೀಂದರಾಜು,
ಕಂಪ್ಯೂಟರ್ ವಿಜಯ ಕುಮಾರ್, ರಾಜೇಶ್, ಧನುಷ್, ರಂಗಸ್ವಾಮಿ ಸೇರಿದಂತೆ ಜಿಕೆ ಡಬ್ಲ್ಯೂ ಲೇಔಟಿನ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!