ಬೆಳಗಾವಿ : ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆದಿದ್ದು, ಕನ್ನಡಿಗರು ಆಯ್ಕೆಯಾಗಿದ್ದಾರೆ.
ವಾರ್ಡ್ ನಂಬರ್ 25ರ ಪಾಲಿಕೆ ಸದಸ್ಯೆ ಪ್ರೀತಿ ವಿನಾಯಕ ಕಾಮಕರ ಬೆಳಗಾವಿಯ ನೂತನ ಮೇಯರ್ ಆಗಿದ್ದಾರೆ.ಬುಧವಾರ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಿತು.
ಬಿಜೆಪಿಯ ಪ್ರೀತಿ ವಿನಾಯಕ ಕಾಮಕರ 39 ಮತಗಳನ್ನು ಪಡೆದು ಜಯಗಳಿಸಿದರು. ಎದುರಾಳಿಯಾಗಿದ್ದ ಕಾಂಗ್ರೆಸ್ನ ಖುರ್ಷಿದಾ ದಾದಾಪೀರ 29 ಮತಗಳನ್ನು ಪಡೆದು ಸೋತರು.
ಉಪ ಮೇಯರ್ ಆಗಿ ವಾರ್ಡ್ ನಂಬರ್ 47ರ ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಆಯ್ಕೆಯಾದರು. ಅವರು 39 ಮತಗಳನ್ನು ಪಡೆದು ಜಯಗಳಿಸಿದರು. ಎದುರಾಳಿ ಕಾಂಗ್ರೆಸ್ನ ಮೋದಿನಸಾಬ್ 20 ಮತಗಳನ್ನು ಪಡೆದು ಸೋಲು ಕಂಡರು.
ನೇಕಾರ ಸಮಯದಾಯದ ಪ್ರೀತಿ ವಿನಾಯಕ ಕಾಮಕರ ಮತ್ತು ಲಿಂಗಾಯತ ಸಮುದಾಯದ ಹನುಮಂತ ಕೊಂಗಾಲಿ ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗಿದ್ದು, ಕನ್ನಡಿಗರಿಗೆ ಮೇಯರ್ ಮತ್ತು ಉಪ ಮೇಯರ್ ಪಟ್ಟ ಸಿಕ್ಕಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ.ಎಂ.ಜಾನಕಿ ಅವರ ನೇತೃತ್ವದಲ್ಲಿ ಬೆಳಗಾವಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಿತು. ಮೊದಲ ಬಾರಿಗೆ ಬೆಳಗಾವಿ ಮೇಯರ್ ಪಟ್ಟ ನೇಕಾರ ಸಮುದಾಯಕ್ಕೆ ಸಿಕ್ಕಿದೆ ಎಂದು ಸದಸ್ಯರು ಸಂತಸ ವ್ಯಕ್ತಪಡಿಸಿದರು.




