Ad imageAd image

ಗೋವಾದಲ್ಲಿ ಡಿ.7 ರಂದು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ

Bharath Vaibhav
ಗೋವಾದಲ್ಲಿ ಡಿ.7 ರಂದು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ
WhatsApp Group Join Now
Telegram Group Join Now

————————————ಸಮ್ಮೇಳನಾಧ್ಯಕ್ಷ ರಾಗಿ ಡಾ.ಬಿರಾದಾರ್ ಆಯ್ಕೆ

ಬೆಂಗಳೂರು :ಗೋವಾದ ಬಿಚೋಲಿಯಂನಲ್ಲಿ ಮುಂಬರುವ ಡಿಸೆಂಬರ್ 7 ರಂದು 16 ನೇ ಕನ್ನಡ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನಾಧ್ಯಕ್ಷರಾಗಿ ಚಿಂತಕರು ವಾಗ್ಮಿಗಳು ಡಾ.ಸಂಗನ ಬಸಪ್ಪ ಬಿರಾದಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಗೋವಾ ಬಿಚೋಲಿಯಂನ ಕರ್ಮ ಭೂಮಿ ಕನ್ನಡ ಸಂಘ, ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ಸರ್ಕಾರ ಸಹಭಾಗಿತ್ವದಲ್ಲಿ ನಡೆಯುವ 16 ನೇ ಸಮ್ಮೇಳನ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ,ಕನ್ನಡ ಪರ ಚಿಂತಕ ವಾಗ್ಮಿಗಳು ಡಾ.ಸಂಗನ ಬಸಪ್ಪ ಬಿರಾದಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ರಾಜಗೋಪಾಲನಗರ ವಾರ್ಡಿನ ವ್ಯಾಪ್ತಿಗೆ ಬರುವ ಕೆಂಪೆಗೌಡ ಲೇಔಟ್ ನಲ್ಲಿರುವ ಡಾ. ಸಂಗನ ಬಸಪ್ಪ ಬಿರಾದಾರ್ ಅವರ ಸ್ವಗ್ರಹ ಕಚೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಹಾ ಲಕ್ಷ್ಮೀ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಪ್ರಕಟಿಸಿದರು.

ಗೋವಾದಲ್ಲಿನ ಎಲ್ಲ ಕನ್ನಡಿಗರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಸಮ್ಮೇಳನದ ಮೆರವಣಿಗೆಯನ್ನು ಬೆಂಗಳೂರಿನ ಹೆಗ್ಗನಹಳ್ಳಿಯ ಸಮಾಜ ಸೇವಕ ಕೆಪಿಸಿಸಿ ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿ ನಿಸ್ಸಾರ್ ಖಾನ್ ೫೦೧ ಹೆಚ್ಚು ಸುಮಂಗಲಿಯರು ಕುಂಬಕಳಸವನ್ನು ಹೊತ್ತು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ.

ಸಮ್ಮೇಳನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಶ್ರೀಪಾದ ನಾಯಕ್,ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾದ ಸಂಸದರು,ಶಾಸಕರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದ ಸಂಯೋಜಕರು ಮಾಹಿತಿ ನೀಡಿದರು.

ಇದೇ ವೇಳೆ,ಗೋವಾದಲ್ಲಿ ನಡೆಯಲಿರುವ 16 ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಡಾ.ಸಂಗನ ಬಸಪ್ಪ ಬಿರಾದಾರ್ ಹಾಗೂ ಮೆರವಣಿಗೆ ಉದ್ಘಾಟಕರಾಗಿ ಆಯ್ಕೆಗೊಂಡಿರುವ ನಿಸ್ಸಾರ್ ಖಾನ್ ಅವರನ್ನು ಸನ್ಮಾನಿಸಿ ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು. ಡಾ.ಸಂಗನ ಬಸಪ್ಪ ಬಿರಾದಾರ್ ಅವರು ಮಾತನಾಡಿ ಗೋವಾದಲ್ಲಿ ನಡೆಯಲಿರುವ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಕ್ಕೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಸಂತೋಷ ಮತ್ತು ಖುಷಿ ತಂದಿದೆ.ಜೊತೆಗೆ, ಈ ಮೂಲಕ ನಾಡು ನುಡಿಗಾಗಿ ದುಡಿಯಲು ಜವಾಬ್ದಾರಿ ಹೆಚ್ಚಿದೆ ಎಂದು ಬಿರಾದಾರ್ ಹೇಳಿದರು.

ದಾಸರಹಳ್ಳಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಅನುಭವಿ ಹಿರಿಯ ಪತ್ರಕರ್ತ ಎಚ್, ಆರ್, ರವೀಶ್, ಹೆಗ್ಗನಹಳ್ಳಿ ಯ ಯುವ ಮುಖಂಡ ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿ ನಿಸ್ಸಾರ್ ಖಾನ್, ಜಾನಪದ ಗಾಯಕ ಕುಣಿಗಲ್ ರಾಮಚಂದ್ರ, ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!