Ad imageAd image

ಅವ್ಯವಸ್ಥೆಯ ಆಗರವಾದ ಕನ್ನೊಳ್ಳಿ ಗ್ರಾಮ ಪಂಚಾಯತಿ

Bharath Vaibhav
ಅವ್ಯವಸ್ಥೆಯ ಆಗರವಾದ ಕನ್ನೊಳ್ಳಿ ಗ್ರಾಮ ಪಂಚಾಯತಿ
WhatsApp Group Join Now
Telegram Group Join Now

ಜಮಖಂಡಿ : ತಾಲ್ಲೂಕಿನ ಕನ್ನೊಳ್ಳಿ ಗ್ರಾಮ ಪಂಚಾಯಿತಿ ಸ್ವಚ್ಛತೆ ಮರೀಚಿಕೆಯಾಗಿದೆ. ಗ್ರಾಮೀಣ ನೈರ್ಮಲ್ಯ ನಿರ್ವಹಣೆಗಾಗಿ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಸ್ವಚ್ಛತೆ ಕಾರ್ಯ ನಿರೀಕ್ಷಿತ ಯಶಸ್ಸು ಕಾಣದಿರುವುದಕ್ಕೆ ಕನ್ನೊಳ್ಳಿ ಗ್ರಾಮ ಪಂಚಾಯಿತಿ ಒಂದು ಉದಾಹರಣೆ.

ಗ್ರಾಮಕ್ಕೆ ಸಂಪರ್ಕಿಸುವ ಪ್ರತಿ ರಸ್ತೆಯಲ್ಲಿ ಅರ್ಧ ರಸ್ತೆ ತಿಪ್ಪೆ ಗುಂಡಿಗಳಿಗೆ ಮೀಸಲಾದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅವುಗಳ ತೆರವಿಗೆ ಮುಂದಾಗುತ್ತಿಲ್ಲ. ಗ್ರಾಮದ ಪ್ರಮುಖ ರಸ್ತೆಗಳ ಮೇಲೆ ನೀರು ಹರಿದು, ನೈರ್ಮಲ್ಯ ಇಲ್ಲದಂತಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಗ್ರಾಮದ ಸರ್ಕಾರಿ ಶಾಲೆಯ ಮುಂದೆಯೇ ಜನರು ಮಲವಿಸರ್ಜನೆ ಮಾಡುತ್ತಾರೆ , ಜನರು ಮನೆಗಳ ಕಸಗಳನ್ನು ಇಲ್ಲೇ ತಂದು ಸುರಿಯುತ್ತಿದ್ದು, ಸರ್ಕಾರಿ ಶಾಲೆಯ ಮಕ್ಕಳಿಗೆ ಕುಡಿಯಲ್ಲು ನೀರಿನ ವ್ಯವಸ್ಥೆವು ಇಲ್ಲದಂತಾಗಿದೆ ಪ್ರಮುಖ ರಸ್ತೆಯ ಪಕ್ಕ ಆಳ ಮತ್ತು ಅಗಲವಾದ ಚರಂಡಿಗಳಿದ್ದು, ಅವುಗಳಲ್ಲಿ ಆಳೆತ್ತರಕ್ಕೆ ಆಪು ಬೆಳೆದು ಪ್ಲಾಸ್ಟಿಕ್‌ ಬಾಟಲಿ ಹಾಗೂ ಕಸಕಡ್ಡಿ ತುಂಬಿವೆ.

ಈ ಎಲ್ಲ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ರಮೇಶ ಜಂಬಗಿ ಅವರ ಗಮನಕು ತಂದರು ಯಾವುದೇ ಪ್ರಯುಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು

ಕನ್ನೊಳ್ಳಿ ಗ್ರಾಮ ಪಂಚಾಯತಿ ಮುಂದೆ ಬಿಸಿಲಿನ ಬಿಸಿಲ ಜಳಕೆ ಜನರನ್ನು ನಿಲ್ಲಿಸಿ ಜನಪ್ರತಿನಿದಿಗಳು ಹಾಗೂ ಗ್ರಾಮ ಪಂಚಾಯತಿ ಅಭಿರುದ್ದಿ ಅಧಿಕಾರಿ ರಮೇಶ ಜಂಬಗಿ ಅವರು ಹಗಲು ಹೊತ್ತಿನಲ್ಲೇ ಸಾರ್ವಜನಿಕರ ಕೆಲಸದ ಸಮಯದಲ್ಲೇ ಗ್ರಾಮ ಪಂಚಾಯತಿ ಬಾಗಿಲು ಬಂದ ಮಾಡಿ ಜನರನ್ನು ಬಿಸಿಲಿನಲ್ಲಿ ಹೊರಗೆ ನಿಲ್ಲಿಸಿ ಗ್ರಾಮ ಪಂಚಾಯತಿ ಸದಸ್ಯರ ಸಭೆ ಮಾಡಿದ ಘಟನೆ ನಡೆದಿದ್ದೆ.

ಈ ಗ್ರಾಮ ಪಂಚಾಯತಿ ಅಭಿರುದ್ದಿ ಅಧಿಕಾರಿಯ ಮೇಲೆ ಸಾರ್ವಜನಿಕರು ಇನ್ನೂ ಅನೇಕ ಹಲವಾರು ಆರೋಪಗಳು ಮಾಡಿದ್ದರು NRG ಯಲ್ಲಿ ಒಂದೇ ಫೋಟೋ ಹಲವಾರು ಕಡೆ ಅಪ್ಲೋಡ್ ಮಾಡಿ ಸರ್ಕಾರದ ಹಣ ದುರೋಪಯೋಗ ಮಾಡಿದ ಆರೋಪವು ಕೇಳಿ ಬಂದಿದ್ದೆ ಇನ್ನು ಈ ಅಧಿಕಾರಿಯ ಮೇಲೆ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಎಂದು ನಮ್ಮ ಬಿವಿ 5 ವರದಿಗಾರರಾದ ಅಜಯ್ ಕಾಂಬಳೆ ಅವರು ಜಮಖಂಡಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯ ಜೊತೆಗೆ ದೊರವಾಣಿ ಮೂಲಕ ಕೇಳಿದಾಗ ಆ ಅಧಿಕಾರಿಯ ಜೊತೆಗೆ ಮಾತನಾಡಿ ಹೇಳುತ್ತೇನೆ ಎಂದು ಕಾಲ್ ಕಟ್ ಮಾಡಿದ್ದರು ಹಲವಾರು ಆರೋಪಗಳು ಕೇಳಿ ಬಂದ ಕನ್ನೊಳ್ಳಿ ಗ್ರಾಮ ಪಂಚಾಯತಿ PDO ರಮೇಶ ಜಂಬಗಿ ಅವರನ್ನು ಕೊಡಲೇ ಕೆಲಸದಿಂದ ವಜಾ ಮಾಡಿ ಇವರ ಮೇಲೆ ಕಾನೂನಿನ ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕೆಂದು ಮಾಧ್ಯಮದ ಮೂಲಕ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ :ಅಜಯ ಕಾಂಬಳೆ

WhatsApp Group Join Now
Telegram Group Join Now
Share This Article
error: Content is protected !!