Ad imageAd image

ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಆತ್ಮ ರಕ್ಷಣೆಗಾಗಿ ಕರಾಟೆ ಒಂದು ಉತ್ತಮ ಸಾಧನೆ:ರಾಜು ಪಾಟೀಲ

Bharath Vaibhav
ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಆತ್ಮ ರಕ್ಷಣೆಗಾಗಿ ಕರಾಟೆ ಒಂದು ಉತ್ತಮ ಸಾಧನೆ:ರಾಜು ಪಾಟೀಲ
WhatsApp Group Join Now
Telegram Group Join Now

ಕಾಗವಾಡ:ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಆತ್ಮ ರಕ್ಷಣೆಗಾಗಿ ಕರಾಟೆ ಒಂದು ಉತ್ತಮ ಸಾಧನೆಯಾಗಿದೆ ಎಂದು ಜಪಾನ ಯಮಾಬುರೆ ಸಿತೊ ರೋಯು ಕರಾಟೆ ಡು ಅಸೋಸಿಯೇಷನ್ ಅಧ್ಯಕ್ಷರು ರಾಜು ಪಾಟೀಲ ಹೇಳಿದರು.

ಅವರು ದಿ‌.18 ರವಿವಾರದಂದು ಪಟ್ಣಣದ ಆಚಾರ್ಯ ಶ್ರೀ 108 ವಿದ್ಯಾಸಾಗರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸೆಲ್ಫ ಡಿಫೆನ್ಸ್ ಮತ್ತು ಕರಾಟೆ ಅಸೋಸಿಯೇಷನ್ ಇವರ ವತಿಯಿಂದ ಕರಾಟೆ ಪಟುಗಳಿಗೆ ಕಲರ ಬೆಲ್ಟ್ ವಿತರಣೆ ಮಾತನಾಡುತ್ತಾ,ಜಪಾನಿ ಯಮಾಬುಕಿ ಸಿತೊ ರುಯಿ ಕರಾಟೆ ಅಸೋಸಿಯೇಷನ್ ಅವರು ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಕರಾಟೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಮಕ್ಕಳ ಆತ್ಮ ರಕ್ಷಣೆ ಬಲ ಹೆಚ್ಚಿಸುವದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಕರಾಟೆ ಕ್ರೀಡಾಕೂಟದಲ್ಲಿ ಪ್ರತಿಶತ ಅಂಕದೊಂದಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತಿದ್ದು.
ಭವಿಷ್ಯದಲ್ಲಿಈ ಭಾಗದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಕೋಟಾದಡಿಯಲ್ಲಿ ಉತ್ತಮ ಅವಕಾಶಗಳನ್ನು ಪಡೆದು ನಮ್ಮ ಭಾಗದ ಕೀರ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಎಂದ ಅವರು,ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಆತ್ಮ ರಕ್ಷಣೆಗಾಗಿ ಕರಾಟೆ ಕಲಿಯುವದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಈ ವೇಳೆ .ಕರಾಟೆ ಅಧ್ಯಕ್ಷರು.ರಾಜು ಪಾಟೀಲ ವಿದ್ಯಾಸಾಗರ ಮಾಲಗಾವೆ,ಪದ್ಮಜೀತ, ಮಾನಗಾವೆ ಕಾವೇರಿ ಪಾಟೀಲ,ಅನೀಲ ಭಜಂತ್ರಿ,ಕಿರಣ ಭಜಂತ್ರಿ, ಕುಮಾರ ಭಜಂತ್ರಿ, ರೋಹಿತ್ ಮಾಳಿ, ದೀಪಕ್ ಪಾಟೀಲ, ಪ್ರಶಾಂತ್ ಅಗಸರ, ಶ್ರೀ ಕಾಂಬಳೆ, ಪ್ರಜ್ವಲ್ ಘಟಕಾಂಬಳೆ,ಉಷಾ ಕೊಕಣೆ, ಪ್ರಜಕ್ತಾ ಪಾಟೀಲ, ಕಾರ್ತಿಕ್ ಅರವಾಡಿ , ಇತರರು ಇದ್ದರು.
ವರದಿ:ಚಂದ್ರಕಾಂತ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!