Ad imageAd image

ಆತ್ಮಹತ್ಯೆಗೆ ಶರಣಾದ ಯುವಕನಿಗೆ ನ್ಯಾಯ ಒದಗಿಸಲು ಕರವೇ ಆಗ್ರಹ

Bharath Vaibhav
ಆತ್ಮಹತ್ಯೆಗೆ ಶರಣಾದ ಯುವಕನಿಗೆ ನ್ಯಾಯ ಒದಗಿಸಲು ಕರವೇ ಆಗ್ರಹ
WhatsApp Group Join Now
Telegram Group Join Now

—————————- ಧಾರವಾಡ: ಟಿ ವಿ ಎಸ್ ಕ್ರೆಡಿಟ್ ಫೈನಾನ್ಸ್ ಕಿರುಕುಳ ಆರೋಪ ಹಿನ್ನೆಲೆ

ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ಯುವಕ ಮಲ್ಲಿಕಾರ್ಜುನ ಶಿರಗುಪ್ಪಿ ವಯಸ್ಸು (33)ಎಂಬಾತ ಬ್ಯಾಂಕಿನ ವಹಿವಾತಿನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿತ್ತು.
ಟಿ ವಿ ಎಸ್ ಕ್ರೆಡಿಟ್ ಫೈನಾನ್ಸ್ ದ್ವಿ ಚಕ್ರ ವಾಹನದ ಸಾಲ ಶ್ರೀಮತಿ ಆತ್ಮಹತ್ಯೆಗೆ ಶರನಾದ ಯುವಕನ ಪತ್ನಿಯ ಮೇಲೆ ಲೇವದೇವಿಯನ್ನು ಮಾಡಿದ್ದರು ಅದರ ಕಂತಿನ ಜೊತೆಗೆ ಅತಿಯಾದ ಬಡ್ಡಿಯನ್ನು ಕಟ್ಟಲೇಬೇಕು ಎಂಬಂತೆ ಕಿರುಕುಳ ನೀಡುತ್ತಿದ್ದರು ಎನ್ನುವ ಮಾಹಿತಿ ಬಹಿರಂಗ ಪಡಿದಿದ್ದಾರೆ.

 

ಮಲ್ಲಿಕಾರ್ಜುನ ಶಿರಗುಪ್ಪಿ ಅದರಂತೆಯೇ ಸುಮಾರು 2 ತಿಂಗಳಿನಿಂದ ವಾಹನದ ಕಂತನ್ನು ವಿಳಂಬ ಮಾಡಿದ್ದೂ ಕಂಡು ಬಂದಿರುತ್ತದೆ ಆದರೆ ಟಿ ವಿ ಎಸ್ ಕ್ರೆಡಿಟ್ ಫೈನಾನ್ಸ್ ಸಿಬ್ಬಂದಿ ಮಲ್ಲಿಕಾರ್ಜುನರಿಗೆ ವಾಹನದ ಹಣವನ್ನು ಕಟ್ಟಲೇಬೇಕು ಇಲ್ಲವಾದಲ್ಲಿ ನಿನ್ನನ್ನು ಬಿಡುವದಿಲ್ಲ ನಿನ್ನ ಮಾನ ಮರಿಯದೆ ಮನೆಯ ಬಂದು ಹರಾಜು ಮಾಡುತ್ತೇವೆ ಎಂದು ಮೊಬೈಲ್ ಫೋನ್ ಮೂಲಕ ಬೆದರಿಕೆಯನ್ನುಹಾಕಿರುತ್ತಾರೆ.

ಇದಕ್ಕೆ ಬೇಸತ್ತ ಯುವಕ ಹೀಗೆ ಒತ್ತಾಯ ಮಾಡಿದರೆ ಹೇಗೆ ಮನೆ ಬಾಡಿಗೆ ಕಟ್ಟಲು ಹಣವಿಲ್ಲ ಕಟ್ಟಲು ಅವಕಾಶ ಕೊಡಿ ಮತ್ತು ವಯಕ್ತಿಕ ಸಮಸ್ಯೆಗಳು ಬಹಳ ಇರುವವು ಎಂದಾಗ, ಬ್ಯಾಂಕಿನ ಸಿಬ್ಬಂದಿ ನೀನು ಸತ್ತರು ಪರವಾಗಿಲ್ಲ ಮೊದಲು ಹಣ ಕಟ್ಟು ಎಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ತದ ನಂತರ ಯುವಕ ಪದೇ ಪದೇ ಮಾಡುತ್ತಿರುವ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಕಂಡುಬದಿದೆ.

ಇದನ್ನು ಅರಿತ ಧಾರವಾಡ ಕರ್ನಾಟಕ ರಕ್ಷಣಾ ವೇದಿಕೆ( ಶಿವರಾಮೇಗೌಡರ ಬಣದ) ಜಿಲ್ಲಾಧ್ಯಕ್ಷರಾದ ಪರಮೇಶ್ವರ ಕಾಳೆ, ಹಾಗೂ ಸಂಘಟನೆಯ ಕಾರ್ಯಕರ್ತರು ಇತ್ತೀಚಿಗೆ ಫೈನಾನ್ಸ್ ಗಳ ಕಿರುಕುಳದ ಹೆಚ್ಚಿನ ಹಾವಳಿ ನಡೆಯುತ್ತಾ ಬಂದಿರುವ ಘಟನೆ ಕಂಡುಬಂದಿವೆ ಈ ರೀತಿ ಬೇರೆ ಯಾವ ಯುವಕರಿಗೂ ಅನಾಹುತಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಅಕ್ಕ ಪಕ್ಕದ ಗ್ರಾಮದ ಯುವಕರು, ಆತ್ಮಹತ್ಯೆಗೆ ಶರಣಾದ ಯುವಕನ ಕುಟುಂಬ ಮತ್ತು ಸ್ನೇಹಿತರು, ಟಿ ವಿ ಎಸ್ ಫೈನಾನ್ಸ್ ನ ಎಜೇಂಟರುಗಳಾದ ವಿರೂ ಹಿರೇಮಠ, ಬ್ಯಾಂಕಿನ ಮ್ಯಾನೇಜರ್ ರವರ ಪ್ರಚೋದನೆ ಹಾಗೂ ಕಿರುಕುಳದ ಮೂಲಕ ಈ ಆತ್ಮಹತ್ಯೆ ಕಂಡು ಬಂದಿರುತ್ತದೆ ಇದನ್ನ ಖಂಡಿಸಿ ಈತನಿಗೆ ಸರಿಯಾದ ನ್ಯಾಯ ವದಗಿಸಬೇಕು ಎಂದು ಮಾನ್ಯ ಧಾರವಾಡ ಜಿಲ್ಲಾ ವರಿಸ್ಟಾ ಧಿಕಾರಿಗಳಿಗೆ ಮನವಿ ನೀ ಡಿದರು.

ಕೂಡಲೇ ಬ್ಯಾಂಕಿನಲ್ಲಿ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅವರ ಮೇಲೆ ಕೊಲೆಯ ಕೇಸ್ ಹಾಕಿ ತಕ್ಕ ಶಿಕ್ಷೆಯನ್ನು ನೀಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಟಿ ವಿ ಎಸ್ ಫೈನಾನ್ಸ್ ಅನುಭವಿಸುವದು ಖಂಡಿತ ಎಂದು ಹೇಳಿದರು.

ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು,ಆತ್ಮಹತ್ಯೆಗೆ ಶರಣಾದ ಯುವಕನ ಪಾಲಕರು, ಸ್ನೇಹಿತರು, ಗ್ರಾಮದ ಯುವಕರು, ಇದ್ದರು.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!