ಅತಿವೃಷ್ಟಿ ಹೆಸರು ಮತ್ತು ಉದ್ದು ಬೆಳೆ ಹಾನಿ ಪರಿಹಾರ ನೀಡಬೇಕು ಮತ್ತು ವಿವಿಧ ಹಳ್ಳಿಗಳ ಹಣದಿ ರಸ್ತೆಗಳು ಸುಧಾರಣೆ ಮಾಡುವಂತೆ ಕರವೇ ಒತ್ತಾಯ.
ಸೇಡಂ:-ತಾಲೂಕಿನಾದ್ಯಂತ ಅತಿವೃಷ್ಟಿ ಮಳೆಯಿಂದ ಹೆಸರು ಮತ್ತು ಉದ್ದು ಬೆಳಗಳು ಸಂಪೂರ್ಣ ಹಾಳಾಗಿದ್ದು ರೈತರ ಖಾತೆಗೆ ಪ್ರತಿ ಎಕರೆಗೆ ರೂ.10,000 ರೂಪಯಿಗಳು ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಪ್ರತಿ ಕ್ವಿಂಟಲಿಗೆ ಬೆಂಬಲ ಬೆಲೆ10000 ಸಾವಿರ ನಿಗಾದಿ ಮಾಡಬೇಕು ಹಾಗೂ ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದ ಹೊಲಗಳಿಗೆ ಹೋಗುವ ರಸ್ತೆಗಳು ಸುಧಾರಣೆ ಮಾಡುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ರಾಜ್ಯ ಸರ್ಕಾರಕ್ಕೆ ತಾಲೂಕ ತಹಸೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ರೈತರು ಅಲ್ಲಲ್ಲಿ ಸಾಲ ಮಾಡಿ ರಸ ಗೊಬ್ಬರ ತಂದು ಬಿತ್ತನೆ ಮಾಡಿದ್ದರೆ ಬಿತ್ತನೆ ಮಾಡಿದ ನಂತರ ಬಸವಣ್ಣ ಹುಳಗಳ ಕಾಟದಿಂದ ಸಂಪೂರ್ಣ ಮೊಳಕೆಗಳು ಹಾಳಾಗಿರುತ್ತವೆ ಇದ್ದ ಅಲ್ಪಸಲ್ಪ ಮೊಳಕೆಗಳಿಗೆ ಅತಿವೃಷ್ಟಿ ಮಳೆಯಿಂದ ಸಂಪೂರ್ಣ ಹೊಲಗಳಲ್ಲಿ ನೀರು ನಿಂತು. ಹೆಸರು ಉದ್ದು ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೀಟನಾಶಕದ ಅಂಗಡಿಗಳ ಮಾಲೀಕರಿಗೆ ಸಾಲದ ಮಾಲೀಕರಿಗೆ ಸಾಲ ಕಟ್ಟಲು ಆಗದೆ ರೈತರು ನೇಣಿಗ ಶರಣಾಗುವ ಪರಿಸ್ಥಿತಿ ಬಂದಿದೆ ರೖತರು ದುಡಿದ ಶ್ರಮವು ವ್ಯರ್ಥವಾಗಿದೆ ಹೆಸರು ಬೆಳೆ ಮತ್ತು ಉದ್ದಿನಬೇಳೆಗಳು ಎತ್ತರಕ್ಕೆ ಬೆಳೆದಿವೆ ಅಷ್ಟೇ ಬೆಳೆದಷ್ಟು ಪ್ರತಿಫಲ ಇಲ್ಲ ಆದ್ದರಿಂದ ಕೃಷಿ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರವೇ ಪ್ರತಿ ಎಕರೆಗೆ 10,000 ರೂಪಾಯಿಗಳು ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಇದು ಅಲ್ಲದೆ ಸೇಡಂ ತಾಲೂಕಿನ ಕೆಲವು ಹಳ್ಳಿಗಳಲ್ಲಿ ರೈತರು ಹೊಲಗಳಿಗೆ ತೆರಳಲು ಹಾಣದಿ ಅಥವಾ ರಸ್ತೆಗಳು ಸಂಪೂರ್ಣ ಅದು ಗಟ್ಟಿವೆ ಬೀರನಹಳ್ಳಿ ಇಂದ ಅರೆ ಬೊಮ್ಮನಹಳ್ಳಿಗೆ ಹೋಗುವ ರಸ್ತೆ ತುಂಬಾ ಅದುಗಟ್ಟಿದ್ದು ಮತ್ತು ರಂಜೋಳ ಗ್ರಾಮದ ರಂಗರವಾರ ಹಾಣದಿ ರಸ್ತೆ ಕಾಚವಾರ ಹಾಣದಿ ರಸ್ತೆ ಚಿಟಕನಪಲ್ಲಿ ಹಳೆಯ ಹಾಣದಿ ರಸ್ತೆ ಇಂತಹ ಅನೇಕ ರಸ್ತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು ಏನು ಪ್ರಯೋಜನವಾಗಿಲ್ಲ ಸ್ವಲ್ಪ ದಿನಗಳಲ್ಲಿ ರೈತರು ಅಲ್ಪ ಸ್ವಲ್ಪ ಬೆಳೆದ ಹೆಸರು ಮತ್ತು ಉದ್ದು ರಾಶಿ ಪ್ರಾರಂಭವಾಗುತ್ತದೆ ರಾಶಿಗಳು ಮನೆಗೆ ತರಲು ಸಹ ಆಗವುದಿಲ್ಲ ಏಕೆಂದರೆ ರಸ್ತೆಗಳು ಕೆಸರಗದ್ದೆಯಂತೆ ಆಗಿವೆ ಎತ್ತಿನ ಬಂಡಿ ಸಹ ಆ ರಸ್ತೆಗಳ ಮೇಲೆ ನಡೆಯುವಂತಿಲ್ಲ ಆದ್ದರಿಂದ ಸಂಬಂಧಪಟ್ಟ ತಾವುಗಳು ರೈತರ ಬೇಡಿಕೆಗಳು ಈಡೇರಿಸುತ್ತಿವಿರೆಂದು ಅಪಾರ ಭರವಸೆಯೊಂದಿಗೆ ರೈತರ ಪರವಾಗಿ ಸಮಸ್ತ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಕೊಡುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಪದಾಧಿಕಾರಿಗಳು ಮತ್ತು ರೈತ ಭಾಂದವರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




