ಸಿಂಧನೂರು: ಜುಲೈ 9, ರಾಯಚೂರಿನಲ್ಲಿ ಜುಲೈ 5ರಂದು ಕರ್ನಾಟಕ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷೆ ನೀತಿಯನ್ನು ಜಾರಿಗೊಳಿಸಬೇಕೆಂದು ಕರವೇ (ನಾರಾಯಣಗೌಡ ಬಣ) ಮಾನ್ಯ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್ ತಿಳಿಸಿ ಅವರು ಮಾತನಾಡಿ ಕರ್ನಾಟಕ ಪಠ್ಯ ಕ್ರಮದಲ್ಲಿ ಸಾಧಾರಣವಾಗಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ದ್ವಿತೀಯ ಭಾಷೆಯನ್ನಾಗಿ ಇಂಗ್ಲಿಷ್ ತೃತೀಯ ಭಾಷೆಯನ್ನಾಗಿ ಹಿಂದಿ ಕಲಿಸಲಾಗುತ್ತದೆ.
ಈ ತ್ರಿಭಾಷೆ ನೀತಿಯನ್ನು ಕನ್ನಡದ ವಿದ್ಯಾರ್ಥಿಗಳಿಗೆ ಅನಗತ್ಯ ಒತ್ತಡವನ್ನು ಹೇರಲಾಗುತ್ತಿದ್ದು ಆದ್ದರಿಂದ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರದಂತಹ ರಾಜ್ಯಗಳು ಈ ದ್ವಿ ಭಾಷೆ ನೀತಿಯನ್ನು ಅನುಸರಿಸುತ್ತಿವೆ ಅದರಂತೆ ಕರ್ನಾಟಕ ಸರ್ಕಾರವು ಕೂಡ ತನ್ನ ಬಾಷಿಕ ಗುರುತನ್ನು ರಕ್ಷಿಸಬೇಕೆಂದು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಒತ್ತಾಯ ಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ. ಸಿಂಧನೂರು ತಾಲೂಕ ಅಧ್ಯಕ್ಷ ಲಕ್ಷ್ಮಣ ಭೋವಿ. ದೇವದುರ್ಗ ತಾಲೂಕ ಅಧ್ಯಕ್ಷ ನಂದಪ್ಪ ಪಿ. ಮಡ್ಡಿ. ರಾಯಚೂರು ತಾಲೂಕ ಅಧ್ಯಕ್ಷ ವೀರೇಶ್ ಸೋನಾ. ಮಾನವಿ ತಾಲೂಕ ಅಧ್ಯಕ್ಷ ಡಿ. ಬಸನಗೌಡ. ಮಸ್ಕಿ ತಾಲೂಕು ಅಧ್ಯಕ್ಷ ದುರ್ಗರಾಜ್ ವಟಗಲ್. ಲಿಂಗಸುಗೂರು ತಾಲೂಕ ಅಧ್ಯಕ್ಷ ರುದ್ರೇಶ್ ಸ್ವಾಮಿ. ಅರಕೆರ ತಾಲೂಕ ಅಧ್ಯಕ್ಷ ರಂಗಣ್ಣ ನಾಯಕ್. ಇನ್ನು ಮುಂತಾದವರು ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ




